
ರಾಕೇಶ್ ಪೂಜಾರಿ ಅವರು ಹೃದಯಘಾತದಿಂದ ನಿಧನ ಹೊಂದಿದ್ದು ಇದೀಗ ಕಾಮಿಡಿ ಕಿಲಾಡಿಗಳು ಟೀಮ್ ರಾಕೇಶ್ ಅವರ ಬಹುದೊಡ್ಡ ಕನಸಾಗಿದ್ದ ತಂಗಿ ಮದುವೆಯನ್ನು ನಡೆಸುವ ನಿರ್ಧಾರ ತೆಗೆದುಕೊಂಡಿದೆ.
ಈ ಬಗ್ಗೆ ಮಾತನಾಡಿದ ನಿರೂಪಕ ಮಾಸ್ಟರ್ ಆನಂದ್ ‘ರಾಕೇಶ್ ಟೆಡ್ಡಿಬೇರ್ ತರಹ ಇದ್ದ. ಎಲ್ಲರಿಗೂ ಇಷ್ಟ ಆಗ್ತಿದ್ದ. ನಿನ್ನೆ ಎಲ್ಲೋ ಖುಷಿಯಾಗಿ ಇದ್ದೆವು. ಆದರೆ, ಈಗ ಈಗ ದುಃಖದಲ್ಲಿ ನಿಂತಿದ್ದೇವೆ. ಒಳ್ಳೊಳ್ಳೆಯ ಆಫರ್ ಬರುತ್ತಾ ಇತ್ತು. ಒಳ್ಳೊಳ್ಳೆಯ ಸಿನಿಮಾ ಮಾಡ್ತಾ ಇದ್ದ. ತಂಗಿ ಮದುವೆ ಮಾಡಬೇಕು ಎಂಬುದು ಕನಸಾಗಿತ್ತು. ಅದನ್ನು ನಾವು ಮಾಡುತ್ತೇವೆ. ಕೈಲಾಸ ತಂದು ಇಟ್ಟರೂ ಅವನ ತಂಗಿಗೆ ಖುಷಿ ಆಗೋದಿಲ್ಲ. ಅಣ್ಣ ಇಲ್ಲ ಎಂಬ ನೋವು ಸದಾ ಇರುತ್ತದೆ. ಆದರೆ, ನಮ್ಮ ಕೈಲಾದದ್ದನ್ನು ಮಾಡುತ್ತೇವೆ. ಅವನು ಅಲ್ಲಿಂದ ಹರಸಲಿ ಎಂದಿದ್ದಾರೆ.





















