ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ “ಗುಡ್ ಟಚ್ ಬ್ಯಾಡ್ ಟಚ್” ಮಾಹಿತಿ ಕಾರ್ಯಕ್ರಮ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು, ಇಲ್ಲಿ ಇಂದು ರೋಟರಿ ಕ್ಲಬ್ ಕಾರ್ಕಳ, ರಾಕ್ ಸಿಟಿ ವತಿಯಿಂದ ಗುಡ್ ಟಚ್ ಬ್ಯಾಡ್ ಟಚ್ ಎಂಬ ಮಾಹಿತಿ ಕಾರ್ಯಕ್ರಮ ರಾಕ್ ಸಿಟಿ ಅಧ್ಯಕ್ಷರಾದ ರೋಟೇರಿಯನ್ ಉಪೇಂದ್ರ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ರೋಟರಿ ಕ್ಲಬ್ ನ ಮಾಜಿ ಜಿಲ್ಲಾ ಗವರ್ನರ್ ಡಾಕ್ಟರ್ ಭರತೇಶ್, ಡಾ. ಶೋಭಿತ ಹಾಗೂ ವರ್ಧಮಾನ ವಿದ್ಯಾಸಂಸ್ಥೆಯ ಸಂಚಾಲಕರಾದ ರೊಟೋರಿಯನ್ ಶಶಿಕಲಾ ಹೆಗ್ಡೆ ವೇದಿಕೆಯಲ್ಲಿಉಪಸ್ಥಿತರಿದ್ದರು. ಹಾಗೆ ರೋಟರಿ ರಾಕ್ ಸಿಟಿ ಸಂಸ್ಥಾಪಕರಾದ ರೊಟೋರಿಯನ್ ಸುರೇಂದ್ರ ನಾಯಕ್,Rt. ಆಸ್ಪತ್ರೆಯ ಪ್ರಾಜೆಕ್ಟರ್ ಆಪರೇಟರ್ ಪುನೀತ್ ಹಾಗೂ ಕುಮಾರಿ ಅದಿತಿ ಆಗಮಿಸಿದರು. ಅವರೆಲ್ಲರನ್ನು ನಮ್ಮ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗಡೆಯವರು ಸ್ವಾಗತಿಸಿದರು. ಡಾಕ್ಟರ್ ಭರತೇಶ್ ರವರು ಪ್ರಾಜೆಕ್ಟರ್ ನಲ್ಲಿ ಪ್ರದರ್ಶನದ ಜೊತೆಯಲ್ಲಿ ವಿವರವಾಗಿ ಗುಡ್ ಟಚ್ ಬ್ಯಾಡ್ ಟಚ್ ನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿ ವಿವರಿಸಿದರು. ಕೊನೆಯಲ್ಲಿ ಮುಖ್ಯ ಶಿಕ್ಷಕರು ಎಲ್ಲರಿಗೂ ಧನ್ಯವಾದ ವಿತ್ತರು.













