29.6 C
Udupi
Tuesday, April 21, 2026
spot_img
spot_img
HomeBlogಶಕ್ತಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಆಟಿಡೊಂಜಿ ದಿನ ಕಾರ್ಯಕ್ರಮ

ಶಕ್ತಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಆಟಿಡೊಂಜಿ ದಿನ ಕಾರ್ಯಕ್ರಮ

ಸಾಣೂರು : ಆ: 08 ರಂದು ಶಕ್ತಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷರಾದ ಗೀತಾ ದೇವಾಡಿಗ ನೇತೃತ್ವದಲ್ಲಿ ನಡೆಸಲಾಯಿತು. ಪ್ರಾಸ್ತಾವಿಕವಾಗಿ ನಿಕಟ ಪೂರ್ವ ಅಧ್ಯಕ್ಷರಾದ ಜಯಲಕ್ಷ್ಮಿ ಶೆಟ್ಟಿಗಾರ್ ಮಾತನಾಡಿದರು. ನಂತರ ಯುವಕ ಮಂಡಲ (ರಿ ) ಸಾಣೂರು ಇದರ ಕಾರ್ಯದರ್ಶಿ ಪ್ರಕಾಶ್ ರಾವ್ ಈ ಕಾರ್ಯಕ್ರಮಕ್ಕೆ ಶುಭ ಕೋರಿದರು. ಚೊ ಸಂಧ್ಯಾ ರವರು ಕ್ಷಯರೋಗದ ಬಗ್ಗೆ ಮಾಹಿತಿ ನೀಡಿದರು. ಕಾರ್ಕಳ ತಾಲೂಕು NRLM ವಲಯ ಮೇಲ್ವಿಚಾರಕರಾದ ಸುಖೇತ ರವರು ಸಂಜೀವಿನಿ ಬಗ್ಗೆ ಮಾಹಿತಿ ನೀಡಿದರು .

ನಂತರ 6 ಬಗೆಯ ಸ್ಪರ್ಧೆ ಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಒಕ್ಕೂಟದ ಮತ್ತು ಸಂಘದ ಸದಸ್ಯರು 52 ಬಗೆಯ ತಿನಿಸುಗಳನ್ನು ಮಾಡಿದ್ದರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರು ಯಶೋಧ ವಿ ಶೆಟ್ಟಿ, ಪಂಚಾಯತ್ ಸದಸ್ಯರು, ಅಂಗನವಾಡಿ ಟೀಚರ್ ಕಸ್ತೂರಿ ಶೆಟ್ಟಿ, ವಿಶಾಲಾಕ್ಷಿ ಆಶಾ ಕಾರ್ಯಕರ್ತೆ ಉಪಸ್ಥಿತರಿದ್ದರು ಮತ್ತು ಕಾರ್ಕಳ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಉಮಾ ,ಡಾಟಾ ಎಂಟ್ರಿ ಅಕ್ಷತಾ , ಸಂಜೀವ್ , ಸಂತೋಷ್ , ಪಂಚಾಯತ್ ಸಿಬ್ಬಂದಿ , ಒಕ್ಕೂಟದ ಪದಾಧಿಕಾರಿಗಳು, ವಾರ್ಡ್ ಪದಾಧಿಕಾರಿಗಳು,ಕೃಷಿ ಸಖಿ ಮತ್ತುಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು , ಸಂಘದ ಸದಸ್ಯರು ಭಾಗವಹಿಸಿದ್ದರು.ಶ್ವೇತಾ ನಿರೂಪಿಸಿದರು, ಜಯಶ್ರೀ ಪ್ರಾರ್ಥನೆ ,ಕಾರ್ಯದರ್ಶಿ ಪ್ರಸಾದಿನಿ ಜೈನ್ ಸ್ವಾಗತಿಸಿದರು, ಕರಿಬಸವೇಶ್ವರಿ ಧನ್ಯವಾದವಿತ್ತರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page