
ಕಾರ್ಕಳ ಅಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯ ಸಭಾಂಗಣಕ್ಕೆ ದಾನಿಗಳ ಸಹಕಾರದಿಂದ ಟೈಲ್ಸ್ ಅಳವಡಿಸಲಾಗಿದ್ದು ಇಂದು ನಾಮ ಪಲಕ ಅನಾವರಣ ಕಾರ್ಯಕ್ರಮವನ್ನು ತುಳುಕೂಟ ಕುವೈಟ್ ನ ಮಾಜಿ ಅಧ್ಯಕ್ಷರಾದ ಚಂದ್ರಹಾಸ್ ಅಣ್ಣಪ್ಪ ಶೆಟ್ಟಿ ಹಾಗೂ ಹಿರಿಯರಾದ ಶ್ರೀಮತಿ ಲೀಲಾವತಿ ಸದಾಶಿವ ಆಳ್ವ ಇವರು ನೆರವೇರಿಸಿದರು .
ಟೈಲ್ಸ್ ಅಳವಡಿಸಲು ಸಹಕರಿಸಿದ ಮಹನೀಯರರಾದ .
1 . ಮೊಗವೀರ್ಸ್ ಅಸೋಸಿಯೇಷನ್ ಕುವೈಟ್ Rs. 75,000/-
- ಗಣ್ ಶ್ಯಾಮ್ ಅತ್ತಾವರ್ ಕುವೈಟ್ Rs. 25000/-
- ವಿಲ್ಸನ್ ಡಿಸೋಜಾ ಫ್ಯಾಮಿಲಿ ಕುವೈಟ್
Rs. 25,000/-
4 ಶ್ರೀಮತಿ ಸ್ವರ್ಣ & ಶ್ರೀ ಚಂದ್ರಹಾಸ್ ಅಣ್ಣಪ್ಪ ಶೆಟ್ಟಿ ಕುವೈಟ್
Rs. 25,000/- ಇವರಿಗೆ ಈ ಕಾರ್ಯಕ್ರಮದ ಮೂಲಕ ಕೃತಜ್ಞಯನ್ನು ಸಮರ್ಪಿಸಲಾಯಿತು. - ವಿಶ್ವ ಹಿರಿಯ ನಾಗರೀಕರ ದಿನಾಚರಣೆಯನ್ನು ಈ ಸಂದರ್ಭದಲ್ಲಿ ಆಯೋಜಿಸಿದ್ದು, 91 ವರ್ಷದ ಹಿರಿಯ ನಾಗರಿಕ ಮಹಿಳೆ ಶ್ರೀಮತಿ ಲೀಲಾವತಿ ಸದಾಶಿವ ಆಳ್ವ , ಹಾಗೂ 81 ವರ್ಷ ಪ್ರಾಯದ ಮಹಿಳೆ ಶ್ರೀಮತಿ ಜಯಂತಿ ಮಾಧವ ಸ್ವಾಮಿ ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಎಂ.ಸಿ ಮಣಿಪಾಲ ಮಕ್ಕಳ ಫಿಸಿಯೋಥೆರಪಿಸ್ಟ್ ವಿಭಾಗದ ಮುಖ್ಯಸ್ಥರು ಡಾ.ಭಾಮಿನಿ, ಶಾಲಾ ಹಿತೈಷಿಗಳಾದ ಅರುಣ್ ಕುಮಾರ್ ಶೆಟ್ಟಿ, ಪುಷ್ಪಾ ಶೆಟ್ಟಿ, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಉಪಸ್ಥಿತರಿದ್ದರು.
ಶಾಲಾ ಹಿತೈಷಿಗಳಾದ ಶ್ರೀ ಚಂದ್ರಹಾಸ್ ಶೆಟ್ಟಿ ಇವರ ಜನ್ಮ ದಿನವನ್ನು ದೇವರ ಮಕ್ಕಳೊಂದಿಗೆ ಆಚರಿಸಲಾಯಿತು.
ವಿಶೇಷ ಶಿಕ್ಷಕಿ ಶ್ರೀಮತಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿ ಡಾ.ಕಾಂತಿ ಹರೀಶ್ ಸ್ವಾಗತಿಸಿ, ಶ್ರೀಮತಿ ಶ್ವೇತಾ ವಂದಿಸಿದರು.














