
ರೋಟರಿ ಕ್ಲಬ್ ಕಾರ್ಕಳ ಇದರ ವಾರದ ಸಭೆಯು ರೋಟರಿ ಬಾಲಭವನದಲ್ಲಿ ನಡೆಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಲಬ್ಬಿನ ಅಧ್ಯಕ್ಷರಾದ ಇಕ್ಬಾಲ್ ಅಹಮದ್ ಎಲ್ಲರನ್ನು ಸ್ವಾಗತಿಸಿದರು.


ಮುಖ್ಯ ಅತಿಥಿಯಾಗಿ ಹೆಚ್ಚುವರಿ ಪೊಲೀಸ್ ಅದೀಕ್ಷಕರ ಕಚೇರಿ ಉಡುಪಿ ಇಲ್ಲಿಯ ಹೆಡ್ ಕಾನ್ಸ್ಟೇಬಲ್ ಸಂತೋಷ್ ಕಾರ್ಕಳ ರವರು ಪೋಲೀಸ್ ಇಲಾಖೆಯಿಂದ ಹಿರಿಯ ನಾಗರಿಕರಿಗೆ ಹಾಗೂ ಇತರರಿಗೆ ಸಿಗುವ ವಿವಿಧ ಸೇವೆಗಳು, ಸೌಲಭ್ಯಗಳು ಮತ್ತು ಸೈಬರ್ ವಂಚನೆ ಬಗ್ಗೆ ವಿವರವಾದ ಉಪಯುಕ್ತ ಮಾಹಿತಿ ನೀಡಿ ಜಾಗೃತಿ ಮೂಡಿಸಿ ಹಿರಿಯ ನಾಗರಿಕರಿಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಆಸರೆ ಆಗಿದ್ದು ಪೊಲೀಸ್ ಇಲಾಖೆಯು ಸದಾ ನಿಮ್ಮ ಸೇವೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು ರೋಟರಿ ಮಾಹಿತಿಯನ್ನು ವೃಂದ ಹರಿಪ್ರಕಾಶ್ ಇವರು ನೆರವೇರಿಸಿ ಕೊಟ್ಟರು. ಚೇತನಾ ಪ್ರಭುರವರು ಅತಿಥಿಗಳನ್ನು ಪರಿಚಯಿಸಿದರು . ಕಾರ್ಯದರ್ಶಿ ಗಣೇಶ್ ಸಾಲಿಯಾನ್ ವಂದಿಸಿದರು.









































