30.5 C
Udupi
Thursday, April 9, 2026
spot_img
spot_img
HomeBlogರಾ.ಹೆ. 169 : ಸಾಣೂರಿನಲ್ಲಿ ಕಳಪೆ ಪೈಪ್ ಲೈನ್ ಅಳವಡಿಕೆ _ ನಿರಂತರ ಕುಡಿಯುವ ನೀರು...

ರಾ.ಹೆ. 169 : ಸಾಣೂರಿನಲ್ಲಿ ಕಳಪೆ ಪೈಪ್ ಲೈನ್ ಅಳವಡಿಕೆ _ ನಿರಂತರ ಕುಡಿಯುವ ನೀರು ಸೋರಿಕೆ.!?!?

ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿ ಯ ಸಾಣೂರು ಸೇತುವೆ ಬಳಿ NH ಅವರು ಹಾಕಿದ HD ಪೈಪ್ ಲೈನ್ ತೀರಾ ಕಳಪೆ ಗುಣ ಮಟ್ಟದ ಸಾಮಾಗ್ರಿಯಾಗಿದ್ದು, ಅಲ್ಲಲ್ಲಿ ಬಿರುಕು ಬಿಟ್ಟು ಗ್ರಾಮಸ್ತರಿಗೆ ನೀರೇ ಕೊಡಲಾಗದಂತ ಪರಿಸ್ಥಿತಿ ಬಂದಿದೆ.

ಸಾಣೂರು ಸೇತುವೆ ಪರಿಸರದಿಂದ ಶೇಡಿಗುಡ್ಡೆ ಯೇರ್ನಡ್ಕ ರಸ್ತೆ ಯ ಜನರಿಗೆ ಸುಮಾರು ಎರಡು ವಾರ ದಿಂದ ನೀರಿಲ್ಲ, pdo ಅವರಿಗೆ ಮುಖತಾ ಅಥವಾ ಫೋನ್ ಮೂಲಕ ತಿಳಿಸಿದಾಗ ಅವರು NH ನವರಿಗೆ ತಿಳಿಸಿದ್ದೇನೆ ಎಂದು ಹೇಳುತ್ತಾರೆ.

ಪಂಚಾಯತ್ ಅವಧಿ ಮುಗಿದಿದೆ.

ಪಂಚಾಯತ್ ಸದಸ್ಯರ ಬಳಿ ತಿಳಿಸಿದರೆ ಪಿಡಿಒ ಗೆ ದೂರು ಕೊಡಿ ಎನ್ನುತ್ತಾರೆ.

ಪಿಡಿಓ ರವರು ಹೆದ್ದಾರಿ ಗುತ್ತಿಗೆದಾರರಿಗೆ ಹೇಳಿದ್ದೇನೆ ಎಂದು ತಿಳಿಸುತ್ತಾರೆ.

ಜವಾಬ್ದಾರಿಯನ್ನು ತೆಗೆದುಕೊಳ್ಳುವವರು ಯಾರು ಎನ್ನುವ ಪ್ರಶ್ನೆ ಗ್ರಾಮಸ್ಥರಿಗೆ ಕಾಡುತ್ತಿದೆ.

ಕಡು ಬೇಸಿಗೆಯ ಕಾಲದಲ್ಲಿ ದಿನವಿಡಿ ಧಾರಾಕಾರವಾಗಿ ನೀರು ಸೋರಿಕೆಯಾಗುತ್ತಿದ್ದು, ಬೇಜವಾಬ್ದಾರಿಯ ನಡವಳಿಕೆಗೆ ಕಡಿವಾಳ ಹಾಕುವವರು ಯಾರು? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page