
ವಿಜಯಪುರ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು `ಆಪರೇಷನ್ ಸಿಂಧೂರ’ ಬೆಂಬಲ ಕೊಟ್ಟಿದ್ದೇವೆ. ಪಾಕಿಸ್ತಾನಕ್ಕೆ ಸರಿಯಾಗಿ ಪಾಠ ಕಲಿಸಬೇಕು ಎನ್ನುವ ಕಾರಣಕ್ಕೆ ಬೆಂಬಲ ಕೊಟ್ಟಿದ್ದೆವು. ಆದರೆ ಕದನ ವಿರಾಮ ಘೋಷಣೆ ಮಾಡುವಾಗ ಯಾವ ಉದ್ದೇಶದಿಂದ, ಯಾವ ಗುರಿ ಇಟ್ಟುಕೊಂಡು ಕದನ ಮಾಡಿದ್ದೇವೆ. ಆ ಗುರಿ ಈಡೇರಿದೆಯಾ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಮೋದಿಯವರು ಬರೀ ಭಾಷಣ ಮಾಡಿದರೆ ನಡೆಯಲ್ಲ, ಕದನ ವಿರಾಮದ ಬಗ್ಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪಾಕಿಸ್ತಾನಕ್ಕೆ ಯಾವ ಪಾಠ ಕಲಿಸಲು ಹೊರಟಿದ್ದೇವೆ. ಅದನ್ನು ಕಲಿಸಿದ್ವಾ? ನಾಲ್ಕೈದು ದಿನ ಯುದ್ಧ ಮಾಡಿ ಬಿಟ್ಟರೆ, ಇದು ಸರಿಯಾ? ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? ಅಮೆರಿಕ ಹೇಳಿದೆ ಎಂದು ಕದನ ವಿರಾಮ ಘೋಷಣೆ ಮಾಡಿದ್ರಾ? ಅಮೆರಿಕ ನಮ್ಮ ಆಂತರಿಕ ವಿಷಯಗಳ ಬಗ್ಗೆ ತೀರ್ಮಾನ ಮಾಡುವುದಾದರೆ ನಮ್ಮ ಸಾರ್ವಭೌಮತ್ವದ ಬಗ್ಗೆ ಏನು ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.





















