
ಕಾರ್ಕಳ: ಅ.6 ರಂದು ಶ್ರೀ ಮಾರಿಯಮ್ಮ ದೇವಸ್ಥಾನದ ವಠಾರದಲ್ಲಿ ಮುನಿಯಾಲ್ ಬಂಟರ ಸಂಘದ ಪದಾಧಿಕಾರಿಗಳ ಸಭೆ ನಡೆದಿದ್ದು, ಈ ಹಿಂದಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಅವಧಿ ಮೂರು ವರ್ಷ ಮುಗಿದಿದ್ದು ನಿನ್ನೆ ಸಮಿತಿಯ ಗೌರವ ಅಧ್ಯಕ್ಷರಾದ ವೈ ದಿವಾಕರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹೊಸ ಸಮಿತಿಯನ್ನು ರಚನೆ ಮಾಡಲಾಯಿತು.
ಮುಂದಿನ ಮೂರು ವರ್ಷದ ಅವಧಿಗೆ ಸಮಿತಿಯ ಸರ್ವ ಸದಸ್ಯರು ಸೇರಿ ಸತೀಶ್ ಶೆಟ್ಟಿ ಮುಟ್ಲುಪಾಡಿ ಇವರನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿರುತ್ತಾರೆ . ಹಾಗೆಯೇ ಸಂಘದ ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಸುರೇಂದ್ರ ಶೆಟ್ಟಿ ಮುನಿಯಾಲ್ ಹಾಗೂ ಭಾರವಿ ಶೆಟ್ಟಿ ಪಡುಕುಡೂರು ,ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಶೆಟ್ಟಿ ಮುನಿಯಾಲ್ ,ಕಾರ್ಯದರ್ಶಿಯಾಗಿ ವಿನೋದ್ ರಾಜ್ ಶೆಟ್ಟಿ ಖಜಾಂಚಿಯಾಗಿ C.A. ನಿತೇಶ್ ಶೆಟ್ಟಿ , ಕ್ರೀಡಾ ಕಾರ್ಯದರ್ಶಿಯಾಗಿ ಸುಹಾಸ್ ಶೆಟ್ಟಿ ಮುಟ್ಲುಪಾಡಿ ಆಯ್ಕೆಯಾಗಿರುತ್ತಾರೆ.













