
ಬೆಳಗಾವಿ :ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ fir ದಾಖಲಾದ ವಿಚಾರವಾಗಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದೊಂದು ಕಾನೂನು ಪ್ರಕ್ರಿಯೆ. ತನಿಖೆ ಎದುರಿಸುತ್ತೇವೆ ಎಂದು ಮುಖ್ಯಮಂತ್ರಿಗಳೇ ಗಂಟಾಘೋಷವಾಗಿ ಹೇಳಿದ್ದು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ, ಜಗಲ್ಲ, ಬಗ್ಗಲ್ಲ. ಕಾನೂನು ಪ್ರಕಾರ ತನಿಖೆ ಏನು ಆಗಬೇಕು ಆಗುತ್ತೆ ಎಂದು ಹೇಳಿದ್ದಾರೆ.
ಸಿಎಂ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದರೆ ಬಿಜೆಪಿಗರಿಗೆ ನಾಚಿಕೆಯಾಗಬೇಕು. ಎಚ್ಡಿಕೆ, ನಿರ್ಮಲಾ ಸೀತಾರಾಮನ್, ನರೇಂದ್ರ ಮೋದಿ ರಾಜೀನಾಮೆಗೆ ಒತ್ತಡ ಮಾಡಬೇಕು. ಎಲೆಕ್ಟ್ರಾನ್ ಬಾಂಡ್ ನ 6,000 ಕೋಟಿ ಹಗರಣದಲ್ಲಿ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು ವಿತ್ತ ಸಚಿವೆ ನಿರ್ಮಲ ಸೀತಾರಾಮ ವಿರುದ್ಧ fir ದಾಖಲಿಸಲು ಆದೇಶಿಸಿತ್ತು. ಮೊದಲು ಬಿಜೆಪಿಗರು ಸುಪ್ರೀಂ ಕೋರ್ಟ್ ಆದೇಶ ಪಾಲಿಸಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ ಪಡೆಯಲಿ. ಬಳಿಕ ಬಿಜೆಪಿಗರು ನಮ್ಮ ಸಿಎಂ ಅವರ ರಾಜೀನಾಮೆ ಕೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳ ಅಸ್ಥಿರಗೊಳಿಸಲು ಒಂದಲ್ಲ ಒಂದು ಅಸ್ತ್ರಪ್ರಯೋಗ ನಡೆಯುತ್ತಿದ್ದು ರಾಜ ಭವನ ಕೂಡ ಇದಕ್ಕೆ ಹೊರತಾಗಿಲ್ಲ ರಾಜಕೀಯ ದುರುದ್ದೇಶದಿಂದ ಮಾಡ್ತಿರುವ ಷಡ್ಯಂತ್ರಕ್ಕೆ ನಾವು ಕಾನೂನಿನ ಮೂಲಕ ಉತ್ತರಿಸುತ್ತೇವೆ ಎಂದು ತಿರುಗೇಟು ನೀಡಿದರು.













