ಕರಕರಿ ಫ್ರೆಂಡ್ಸ್ ಸೇವಾ ಬಳಗ ರಿ. ಕರ್ನಾಟಕ ವತಿಯಿಂದ ಸಂತಾಪ

ಕಾರ್ಕಳ: ಹೋಟೆಲ್ ಉದ್ಯಮಿಯಾಗಿದ್ದುಕೊಂಡು ಎಲ್ಲರ ಜೊತೆಗೆ ಉತ್ತಮ ಭಾಂದವ್ಯತೆಯನ್ನು ಇಟ್ಟುಕೊಂಡು ಕರಕರಿ ಫ್ರೆಂಡ್ಸ್ ವತಿಯಿಂದ ನಡೆಯುತ್ತಿರುವ ಪ್ರತೀ ಕಾರ್ಯಕ್ರಮಗಳಿಗೆ ಪ್ರತೀ ಬಾರಿಯೂ ಉಚಿತವಾಗಿ ಸಭಾಂಗಣವನ್ನು ನೀಡಿ ಉತ್ತಮ ಸಹಕಾರದೊಂದಿಗೆ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದುಕೊಂಡು ಎಲ್ಲರಿಗೂ ಮಾರ್ಗದರ್ಶಕರಾಗಿ ನಮ್ಮ ಸಂಸ್ಥೆಯ ಗೌರವ ಸಲಹೆಗಾರರಾಗಿರುವ ಬೈಲೂರು ಮಾರಿಯಮ್ಮ ದೇವಸ್ಥಾನದ ಸಂಚಾಲಕರಾದ ಶ್ರೀಯುತ ಕೃಷ್ಣ ರಾಜ ಹೆಗ್ಡೆ (ತಮ್ಮಣ್ಣ) ನಿಧನರಾಗಿರುವುದು ನಮಗೆಲ್ಲರಿಗೂ ಅತೀವ ದುಃಖವನ್ನು ಉಂಟು ಮಾಡಿದೆ.
ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಮನೆಯವರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವ ಅಧ್ಯಕ್ಷರು/ ಪದಾಧಿಕಾರಿಗಳು/ ಸರ್ವ ಸದಸ್ಯರು ಕರಕರಿ ಫ್ರೆಂಡ್ ಸೇವಾ ಬಳಗ(ರಿ ) ಕರ್ನಾಟಕ



















