
ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಒದಗಿಸುವ ಉದ್ದೇಶದಿಂದ ಮಂಡಿಸಲಾದ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ-2026’ ಶುಕ್ರವಾರ ಲೋಕಸಭೆಯಲ್ಲಿ ತಿರಸ್ಕೃತವಾಗಿದೆ. ಇದರೊಂದಿಗೆ 2029ರ ಲೋಕಸಭೆ ಚುನಾವಣೆಯಿಂದ ಮಹಿಳಾ ಮೀಸಲಾತಿ ಜಾರಿಗೊಳಿಸುವ ಕೇಂದ್ರ ಸರ್ಕಾರದ ಯೋಜನೆಗೆ ಹಿನ್ನಡೆಯಾಗಿದೆ.
ಸಾಂವಿಧಾನಿಕ ತಿದ್ದುಪಡಿ ಮಸೂದೆ ಆಗಿರುವುದರಿಂದ ಅಗತ್ಯವಿದ್ದ 3ನೇ 2ರಷ್ಟು ಬಹುಮತ ದೊರಕದೆ, ಮಸೂದೆ 54 ಮತಗಳ ಅಂತರದಿಂದ ಸೋಲನುಭವಿಸಿದೆ.













