
ಮಹಾಭಾರತದ ನೂರಾರು ಕಥೆಗಳು
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಜಂಟಿಯಾಗಿ ಆಯೋಜಿಸಿದ ಮಹಾಭಾರತ ಭಾವದೀಪದ ಚತುರ್ಥ ಸೋಪಾನ ನೂರಾರು ಕಥೆಗಳು ಉಪನ್ಯಾಸ ಮಾಲಿಕೆ ಹೋಟೆಲ್ ಪ್ರಕಾಶದಲ್ಲಿ ನಡೆಯಿತು .
ಉಪನ್ಯಾಸಕರಾದ ಡಾ ವಿನಾಯಕ ಭಟ್ ಗಾಳಿಮನೆಯವರು ಕುಂತಿಗೆ ದೂರ್ವಾಸ ಮುನಿಗಳಿಂದ ಸಿಕ್ಕಿದ 5 ವರಗಳು, ಕೌರವ ,ಪಾಂಡವರ ಹುಟ್ಟು , ವಿದುರ ನೀತಿಯ ಮಹತ್ವ, ವ್ಯಾಸರ ಕಾವ್ಯದ ಪಾರದರ್ಶಕತೆಗಳನ್ನು ಸೋದಾಹರಣವಾಗಿ ವಿವರಿಸಿದರು. ವೇದಿಕೆಯಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ. ಮೊಗಸಾಲೆ. ಕಾರ್ಕಳ ಅಭಾಸಾಪದ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಉಪಸ್ಥಿತರಿದ್ದರು. ಜಯರಾಮ್ ನಾಯಕ್ ರ ಶಾರದಾ ಸ್ತುತಿಯೊಂದಿಗೆ, ಅಭಾಸಾಪದ ಗೌರವ ಅಧ್ಯಕ್ಷರಾದ ನಿತ್ಯಾನಂದ ಪೈಯವರು ಸ್ವಾಗತಿಸಿ ಜಗದೀಶ್ ಗೋಖಲೆ ವಂದಿಸಿ, ಕಾರ್ಯದರ್ಶಿ ಸುಲೋಚನ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.













