
ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ತಾವು 16 ವರ್ಷಗಳಿಂದ ಪ್ರೀತಿಸುತ್ತಿರುವ ನಿತಿನ್ ಹೆಸರಿನ ರಂಗಭೂಮಿ ಕಲಾವಿದನ ಜೊತೆ ಮಂತ್ರ ಮಾಂಗಲ್ಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಶುಕ್ರವಾರ ಬೆಂಗಳೂರು ಹೊರವಲಯ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ನಲ್ಲಿ ಮಂತ್ರ ಮಾಂಗಲ್ಯ ವಿವಾಹ ಜರುಗಲಿದ್ದು ವಧು ಮತ್ತು ವರನ ಕಡೆಯ ಹತ್ತಿರದ ಬಂಧುಗಳು ಹಾಗೂ ಕೆಲವೇ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈ ಅಂತರ್‌ಧರ್ಮೀಯ ಮದುವೆ ವಿಶೇಷವಾಗಿದ್ದು ಆಮಂತ್ರಣ ಪತ್ರಿಕೆಯಲ್ಲಿ , ಪ್ರೀತಿ ವಿಶ್ವದ ಭಾಷೆ, ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಸುಹಾನಾ ಹಾಗೂ ನಿತಿನ್ ಮದುವೆಯಾಗುತ್ತಿದ್ದೇವೆ. ನಮ್ಮ ನಡೆ ವಿಶ್ವಮಾನವತ್ವದೆಡೆಗೆ ಎಂದು ಹೇಳಿಕೊಂಡಿದ್ದಾರೆ.








































