ಕಥೆ (ಭಾಗ- 9)
ಚೇತನ್ ವರ್ಕಾಡಿ

…
ಹಲೋ ಡಿಯರ್ ಅನ್ನೊ ಹೆಣ್ಣಿನ ಧ್ವನಿಯೊಂದು ಮಧುವಿನ ಮೊಬೈಲ್‌ನಿಂದ ಕೇಳಿಯೆ ಬಿಟ್ಟಿತು.ರೀ ಯಾರ್ರಿ ನೀವು ರಾಂಗ್ ಆಗಿ ಯಾರಿಗೊ ಕಾಲ್ ಮಾಡಿ ಪ್ರೇಮಲೋಕದಲ್ಲಿ ಹಾರಾಡಬೇಡ್ರಿ ಇದು ರಾಂಗ್ ನಂಬರ್ ಎಂದು ಕಾಲ್ ಕಟ್ ಮಾಡಬೇಕೆನ್ನುವಷ್ಟರಲ್ಲಿ!ರಿ! ರಿ !ರಿ ಕಟ್ ಮಾಡ್ಬೇಡಿ ಇದು ರಾಂಗ್ ನಂಬರ್ ಅಲ್ಲ ರೈಟ್ ನಂಬರೆ ಐ ಯೆಮ್ ಸೌಂಧರ್ಯ ಎಂದು ನಗುವ ಧ್ವನಿಯಲ್ಲಿ ಮಾತುಮುಂದುವರಿಸಬೇಕಾದರೆ!ಓ ನೀವಾ ಎಂದು ಉದಾಸೀನವಾಗಿ ಉತ್ತರಿಸಿದ.ಮತ್ತೆ ಆ ಕಡೆಯಿಂದ ಸೌಂಧರ್ಯಳ ಮಾತು ಮುಂದುವರಿಯತೊಡಗಿತು.ಅಲ್ಲ ಮಧು ಹೆಣ್ಣು ನೋಡಿಕೊಂಡು ಒಂದು ವಾರ ಕಳೆಯಿತು ಇಷ್ಟು ದಿನ ಆದ್ರು ಒಂದು ರಿಪ್ಲೈ ಇಲ್ಲ ನಿಮ್ದು ನಾನಂತು ಮೇರೇಜ್ ಆದ್ರೆ ನಿಮ್ಮನ್ನೆ ಅಂತ ಡಿಸೈಡ್ ಮಾಡಿದ್ದೀನಿ ಅದಷ್ಟು ಬೇಗ ಓಕೆ ಅಂದ್ಬಿಡಿ ಮಧು ಎಂದು ಒಯ್ಯಾರವಾಗಿ ಮಾತನಾಡುತ್ತಿದ್ದರು!ಕಿರಿಕಿರಿಯಿಂದ ಹೇಗೊ ಸಹಿಸುತ್ತಿದ್ದ ಮಧು ಸಡನ್ನಾಗಿ ಕಾಲ್ ಕಟ್ ಮಾಡಿಯೆಬಿಟ್ಟ.ಮತ್ತೆ ಮತ್ತೆ ಕಾಲ್ ಬರತೊಡಗಿತಾದರೂ ಕೋಪ ನೆತ್ತಿಗೇರಿದ ಮಧು ಮೊಬೈಲ್ ಸ್ವಿಚ್ ಆಫೆ ಮಾಡ್ಬಿಟ್ಟ.ಕೋಪದಿಂದಲೆ ಹೊರಗಡೆ ಬಂದವನೆ!ಮಮ್ಮೀ ಮಮ್ಮಿ ಎಂದು ಜೋರಾಗಿ ಕರೆಯಬೇಕಾದರೆ ಯಾವತ್ತೂ ಇಷ್ಟು ಜೋರಾಗಿ ಕರೆಯದ ಮಧುವಿನ ಸ್ವರಕ್ಕೆ ಬೇಗನೆ ಓಗೊಟ್ಪು ಸುಗಂಧಿ ಅಡಿಗೆ ಕೋಣೆಯಿಂದ ಬಂದವಳೆ!ಏನೊ ಮಧು ಅಷ್ಟು ಜೋರಾಗಿ ಕರೆಯುತ್ತಿದ್ದಿಯ ಏನಾಯ್ತೊ ಎಂದು ಮಗನ ಮುಖ ನೋಡಬೇಕಾದರೆ!ಕೋಪದಿಂದ ಕುದಿಯುತ್ತಿತ್ತು ಆತನ ಮುಖ.ಮಮ್ಮಿ ನನ್ ನಂಬರ್ ಸೌಂದರ್ಯಳಿಗೆ ಕೊಟ್ಟೊರು ಯಾರು ಎಂದು ಕೇಳಬೇಕಾದರೆ ಸೋಮಶೇಖರರಾಯರು ದೇವರಕೋಣೆಯಿಂದ ನಾನೆ ಕಣೊ ಕೊಟ್ಟಿದ್ದು ಎಂದು ಹೇಳಿ ಮುಗಿಸಬೇಕೆನ್ನುವಷ್ಟರಲ್ಲಿ…..
(ಮುಂದುವರಿಯುವುದು)













