ಕಥೆ (ಭಾಗ- 7)
ಚೇತನ್ ವರ್ಕಾಡಿ

ಗಂಡನ ಧ್ವನಿಗೆ ಓಗೊಟ್ಟು ಅವಸರವಸರವಾಗಿ ಯಶೋಧ ಓಡಿ ಒಂದವಳೆ! ಏನ್ರಿ ಅಷ್ಟೊಂದು ಜೋರಾಗಿ ಕೂಗುತ್ತಾ ಇದ್ದಿರ ಸ್ವಲ್ಪ ಸಮಾಧಾನವಾಗಿ ಕರೆಯಬಾರದೆ ಎಂದು ಪ್ರೀತಿ ತುಂಬಿದ ಕೋಪದ ಮಾತುಗಳಿಂದ ಮಾತುಮುಂದುವರಿಸಿದಾಗ! ಹೆಂಡತಿಯ ಮಾತಿಗೆ ಪ್ರತ್ಯುತ್ತರವಾಗಿ ರಾಘವ ಮಾತು ಮುಂದುವರಿಸಿದ.ನೋಡೆ ಯಶೋಧ ನಾನು ನಿನ್ನ ಕರೆಯೋದಕ್ಕೆ ಒಂದು ಕಾರಣ ಇದೆ ಕಣೇ!ನಾನು ಹೊಲದಲ್ಲಿ ಕೆಲಸ ಮಾಡ್ತಾ ಇರೋವಾಗ ಪಕ್ಕದೂರಿನ ನನ್ನ ಹಳೆಯ ಗೆಳೆಯ ಮೋಹನ ಆ ದಾರಿಯಾಗಿ ಬರುತ್ತಿದ್ದ. ಅವನೆ ದೂರದಿಂದ ನನ್ನ ನೋಡಿ ಖುಷಿ ಖುಷಿಯಾಗಿ ಹತ್ತಿರ ಬಂದು ಒಂದಷ್ಟು ಹೊತ್ತು ಹರಟೆ ಹೊಡೆದದ್ದು ಮಾತ್ರವಲ್ಲದೆ ನಮಗೊಂದು ಖುಷಿಯ ವಿಚಾರವನ್ನು ಕೂಡ ತಂದಿದ್ದ ಕಾಣೆ!ಆದ್ರೆ ಮನೆಗೆ ಬಾ ಎಂದು ಎಷ್ಟು ಒತ್ತಾಯ ಮಾಡಿದ್ರು ಇನ್ನೊಮ್ಮೆ ಬರೋಕೆ ಇದ್ದೇ ಇದೆ ಅಲ್ವ ಎಂದು ಹೇಳಿ ಅವನ ಊರಿಗೆ ಹೋಗಿಬಿಟ್ಟ ಎಂದು ರಾಘವ ಮಾತು ನಿಲ್ಲಿಸಿದ.ಯಶೋಧಳಿಗೆ ಎಲ್ಲವೂ ಕುತೂಹಲಭರಿತವಾಗಿ ಕಾಣತೊಡಗಿತು.ಗಂಡನ ಮುಖದೊಳಗೆ ಅರಳಿದ ನಗುವನ್ನು ಕಂಡು ಅವಳ ಕುತೂಹಲ ಮತ್ತಷ್ಟು ಹೆಚ್ಚಾಯಿತು.ರೀ ರೀ ಯಾಕ್ರಿ ಒಬ್ಬರೆ ನಗುತಾ ಇದ್ದಿರ ಏನಾಯ್ತು ಏನು ಅಂತ ಖುಷಿ ವಿಚಾರ ನನ್ಗೂ ಹೇಳಿ ಎಂದು ಯಶೋಧ ತನ್ನ ಗಂಡನಲ್ಲಿ ಕೇಳಿದಾಗ!ದುಡಿದು ದಣಿದಿದ್ದರೂ ಆ ಸಂಭ್ರಮದ ವಿಚಾರದ ಬಾಗಿಲು ತೆಗೆಯಬೇಕೆನ್ನುವಷ್ಟರಲ್ಲಿ….. ಒಳಗಿನಿಂದ ಮಂಗಳ ಅಮ್ಮಾ….ಎಂದು ಜೋರಾಗಿ ಕಿರುಚಿಬಿಟ್ಟಳು.ಮುದ್ದಿನ ಮಗಳ ನೋವಿನ ಕೂಗು ಕೇಳುತ್ತಿದ್ದಂತೆಯೆ ಎರಡು ಜೀವಗಳು ಎಲ್ಲವನ್ನೂ ಮರೆತು ಅವಳತ್ತ ಓಡಿ ನೋಡುವಷ್ಟರಲ್ಲಿ…..
(ಮುಂದುವರಿಯುವುದು)













