ಕಥೆ (ಭಾಗ- 31)
ಚೇತನ್ ವರ್ಕಾಡಿ

ಅವನಿಗೆ ಮಧು ಒಬ್ಬ ರೋಗಿಯಂತೆ ಕಾಣುತ್ತಿರಲಿಲ್ಲ. ಮನದೊಳಗೆ ಅದೇನೊ ನೋವನ್ನು ಇಟ್ಟುಕೊಂಡು ಯಾವೊದೋ ಒಂದು ತನಗೆ ತುಂಬಾ ಹತ್ತಿರವಾದ ವಸ್ತುವನ್ನೋ ಅಥವ ವ್ಯಕ್ತಿಯನ್ನೋ ಕಳೆದುಕೊಳ್ಳುವ ನೋವು ಅವನ ಸುತ್ತ ಆವರಿಸಿದಂತಿತ್ತು. ಪ್ರತಾಪ್ ಮಧುವಿನ ಹತ್ತಿರ ಬಂದವನೆ ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟರೂ ಯಾವುದಕ್ಕೂ ಪ್ರತ್ಯುತ್ತರ ನೀಡದೆ ಸುಮ್ಮನಾದ.ಅಮೇರಿಕಾದಲ್ಲಿ ಎಂತೆಂತಹ ರೋಗಿಯನ್ನು ಗಣಪಡಿಸಿದ ಪ್ರತಾಪ್‌ನಿಗೆ ಅದೇಕೊ ಮಧುವಿನ ರೋಗವನ್ನು ಗುಣಪಡಿಸುವುದರಲ್ಲಿ ತಾನು ಸೋಲುತ್ತೇನೊ ಅನ್ನೊ ಸಂಶಯ ಮನದೊಳಗೆ ಕಾಡಲಾರಂಭಿಸಿತು.ಎಲ್ಲರ ಮುಖದಲ್ಲು ಇನ್ನೇನು ಮಧು ಗುಣಮುಖವಾಗುತ್ತಾನೆ ಅನ್ನೊ ಖುಷಿಯ ಭಾವ ಹುಟ್ಟಿಕೊಳ್ಳುತ್ತಿರುವುದನ್ನು ಪ್ರತಾಪ್ ಗಮನಿಸುತ್ತಿದ್ದ.ಏನೆ ಆಗಲಿ ತನ್ನ ವೃತ್ತಿಯಲ್ಲಿ ಮಧುವಿನ ಕೇಸನ್ನು ಚಾಲೆಂಜ್ ಆಗಿಯೇ ತೆಗೆದುಕೊಂಡುಬಿಟ್ಟ.ಆದರೂ ಯಾವುದಕ್ಕೂ ಒಂದಷ್ಟೂ ಪ್ರತಿಕ್ರಿಯೆ ನೀಡದ ಮಧುವಿಗೆ ಹೇಗೆ ಚಿಕಿತ್ಸೆ ಆರಂಭಿಸಲಿ ಎಂದು ಆಲೋಚಿಸುತ್ತಿರುವಾಗಲೇ ಅಡುಗೆ ಕೋಣೆಯಿಂದ ಮಂಗಳ ಕುಡಿಯೋದಕ್ಕೆ ಜ್ಯೂಸ್ ತೆಗೆದುಕೊಂಡು ಬಂದವಳು ಎಲ್ಲರಿಗೂ ನೀಡಿದಳು.ಪ್ರತಾಪ್ ಒಮ್ಮೆ ಆಕೆಯನ್ನೇ ನೋಡಿದ ಆ ಸುಂದರ ಚೆಲುವಿಗೆ ಬೆರಗಾಗದವರು ಯಾರು ಇರಲ್ಲ.ಮಿಥುನ್ ಮಾತನಾಡುತ್ತಾ ಪ್ರತಾಪ್‌ನ ಗಮನವನ್ನು ಬೇರೆ ಕಡೆ ತಿರುಗಿಸಿದ.ಎಲ್ಲರೂ ಜ್ಯೂಸ್ ಕುಡಿದ ನಂತರ ಗ್ಲಾಸ್ ತೆಗೆದುಕೊಂಡವಳೆ ಹಿಂತಿರುಗಿ ಹೋಗಬೇಕೆಂದರೆ ಗ್ಲಾಸೊಂದು ಕೈ ಜಾರಿ ಕೆಳಗೆ ಬಿತ್ತು.ಎಲ್ಲರ ಗಮನ ಕ್ಷಣ ಮಾತ್ರದಲ್ಲಿ ಅತ್ತಕಡೆ ತಿರುಗ ಬೇಕಾದರೆ,ಅಷ್ಟೂ ಹೊತ್ತು ಯಾವುದಕ್ಕೂ ಒಂದಷ್ಟೂ ಪ್ರತಿಕ್ರಿಯೆ ನೀಡದ ಮಧುವಿನ ಮನಸ್ಸೂ ಮಂಗಳಳತ್ತ ನೇರವಾಗಿ ನೋಡುತ್ತಿದ್ದದ್ದನ್ನು ಗಮನಿಸಿದ ಪ್ರತಾಪ್ ಚಿಕಿತ್ಸೆಯ ಮೊದಲ ಹಂತವನ್ನು ಪ್ರಾರಂಭಿಸಲು ಸಣ್ಣದೊಂದು ದಾರಿ ಆತನಿಗೆ ಗೋಚರವಾಯಿತು.ಒಂದು ತಿಂಗಳ ಕಾಲ ಮಧುವಿಗೆ ಚಿಕಿತ್ಸೆ ನಾನೆ ನಿಂತು ಮಾಡುತ್ತೇನೆ ಆದರೆ ನನಗೊಬ್ಬರು ನರ್ಸ್ ಬೇಕಲ್ಲ ಎಂದು ಪ್ರತಾಪ್ ಹೇಳಿದಾಗ,ಅದಕ್ಕೇನಂತೆ ಒಂದಷ್ಟು ಹೆಚ್ಚು ಸಂಬಳ ಕೊಟ್ಟರೆ ಯಾರಾದರೂ ಸಿಕ್ಕೇ ಸಿಗುತ್ತಾರೆ ಎಂದು ಮಿಥುನ್ ಹೇಳಿದಾಗ,ಪ್ರತಾಪ್ ನಗುತ್ತಾ ಲೋ ಮಿಥುನ್ ಹಣವೊಂದು ಇದ್ದರೆ ಎಲ್ಲವನ್ನೂ ಕೊಂಡುಕೊಳ್ಳಲಾಗದು ಕಣೊ,ಮಧುವನ್ನು ಚೆನ್ನಾಗಿ ಹಾರೈಕೆ ಮಾಡುವ ನರ್ಸ್ ಒಬ್ಬರು ಈ ಮನೆಯಲ್ಲೇ ಇದ್ದಾರೆ ಆಕೆಯ ಕೈಗುಣದಿಂದ ಮತ್ತೆ ಮಧು ಎದ್ದು ನಿಲ್ಲುವ ಭರವಸೆ ನನಗಿದೆ ಎಂದು ಬಾಗಿಲ ಬಳಿ ನಿಂತಿದ್ದ ಮಂಗಳಳನ್ನು ನೋಡುತ್ತಾ ಮಾತುಮುಂದುವರಿಸಿದಾಗ ಎಲ್ಲರಿಗೂ ಆಶ್ಚರ್ಯ….?
ಹಳ್ಳಿ ಹುಡುಗಿಗೂ ಅದೇನೊ ಎದೆಯಲ್ಲಿ ಡವ ಡವ ಹೃದಯದ ಬಡಿತದ ವೇಗ ಗಡಿದಾಟತೊಡಗಿತು…
(ಮುಂದುವರಿಯುವುದು)













