ಕ್ಷೇತ್ರದ ಅಭಿವೃದ್ಧಿಯಲ್ಲಿ, ಶ್ರಮಿಸುತ್ತಿರುವವರ ಉತ್ಸುಕತೆ, ಮುಂದಿನ ಪೀಳಿಗೆಗೆ ಮಾರ್ಗದರ್ಶಕ: ಶಾಸಕ ವಿ.ಸುನಿಲ್ ಕುಮಾರ್
ಜಾತಿ ,ಪಕ್ಷ ಭೇದವಿಲ್ಲದೆ ಕ್ಷೇತ್ರದ ಅಭಿವೃದ್ಧಿ ಕಾರ್ಯ: ಸುಂದರ ಹೆಗ್ಡೆ

ಕಾರ್ಕಳ : ಬ್ರಹ್ಮಶ್ರೀ ಸತ್ಯಸಾರಮಾಣಿ-ಹಲೇರ ಪಂಜುರ್ಲಿ ಚಾಮುಂಡೇಶ್ವರಿ ಗುಳಿಗ ದೈವಸ್ಥಾನ ಹವಾಲ್ದಾರ್ ಬೆಟ್ಟು ಕಾರ್ಕಳ ಇದರ ನೂತನ ಶಿಲಾಮಯ ಗರ್ಭಗುಡಿಯ ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠೆಯ ಅಂಗವಾಗಿ ಜ. 30 ಶಿಲನ್ಯಾಸ ಕಾರ್ಯಕ್ರಮ ನಡೆಯಿತು. ಅರ್ಚಕರಾದ ಗೋಪಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.

ಶಿಲನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್, ಹಿರಿಯರ ಮುಂದಾಳತ್ವದಲ್ಲಿ ಹವಾಲ್ದಾರ್ ಬೆಟ್ಟು ಪರಿಸರದ ಭಕ್ತ ಜನತೆ ಜೊತೆಯಾಗಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಕೊಂಡಿರುವುದು ಅಭಿನಂದನಾರ್ಹ. ಎಲ್ಲರೂ ಜೊತೆಯಾಗಿ ಮಾಡುವ ಕೆಲಸಕ್ಕೆ ದೇವರ ಅನುಗ್ರಹ ಸದಾ ಇರುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿರುವವರ
ಉತ್ಸುಕತೆ ಮುಂದಿನ ಪೀಳಿಗೆಗೆ ಕ್ಷೇತ್ರದ ಕಾರಣೀಕತೆಯನ್ನು ತಿಳಿಸುವಂತಾಗಲಿ ಎಂದರು.
ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಸುಂದರ ಹೆಗ್ಡೆ ಮಾತನಾಡಿ, 66 ವರ್ಷಗಳ ಹಿಂದೆ ಕ್ಷೇತ್ರದಲ್ಲಿ ಗುಡಿ ನಿರ್ಮಾಣ ಮಾಡಿ ದೈವಗಳನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. ಇದೀಗ ಶಿಥಿಲಾವಸ್ಥೆಯಲ್ಲಿರುವ ದೈವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲು ಮುಂದಾಗಿದ್ದು, ಯಾವುದೇ ಜಾತಿ, ಪಕ್ಷ ಭೇದವಿಲ್ಲದೆ ಒಂದು ಕುಟುಂಬದಂತೆ ಎಲ್ಲರೂ ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದ ಅವರು ಕ್ಷೇತ್ರದ ಅಭಿವೃದ್ಧಿಗೆ ಸರ್ವರ ಸಹಕಾರ ಕೋರಿದರು.

ಪುಣೆ ಉದ್ಯಮಿ ಆನಂದ ಶೆಟ್ಟಿ ಮಿಯ್ಯಾರು, ವಾಸ್ತುಶಿಲ್ಪಿ ಪ್ರಮಲ್ ಕುಮಾರ್, ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶುಭದ ರಾವ್ ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಸಂದರ್ಭೋಚಿತವಾಗಿ ಮಾತನಾಡಿ ದೈವಸ್ಥಾನದ ಅಭಿವೃದ್ಧಿಯಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರೂ ಜೊತೆಯಾಗಿ ಕಾರ್ಯನಿರ್ವಹಿಸೋಣ ಎಂದರು.
ವೇದಿಕೆಯಲ್ಲಿ ಬಾಲಾಜಿ ಅಯ್ಯಪ್ಪ ಮಂದಿರದ ಗುರುಸ್ವಾಮಿ ಬಾಲಕೃಷ್ಣ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್, ಕಿರಣ್ ಬಲಿಪರಗುತ್ತು ಮನೆ, ಉದ್ಯಮಿಗಳಾದ ನವೀನ್ ಶೆಟ್ಟಿ, ಅವಿನಾಶ್ ಶೆಟ್ಟಿ,
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಹೆಗ್ಡೆ ಏಳ್ನಾಡುಗುತ್ತು, ಕಾರ್ಯದರ್ಶಿ ಲೋಕೇಶ್ ಬಿ.ಸಾಲಿಯಾನ್ ಬರ್ಕೆ ಮನೆ ಹಾಗೂ ಗೌರವ ಸಲಹೆಗಾರ ಪ್ರಶಾಂತ್ ಶೆಟ್ಟಿ ಹವಾಲ್ದಾರ್. ನವೀನ್ ದೇವಾಡಿಗ. ಪ್ರವೀಣ್ ಶೆಟ್ಟಿ ಸೀತಾರಾಮ್ ಶೆಟ್ಟಿ ರಾಕೇಶ್ ಶೆಟ್ಟಿ ಪ್ರಕಾಶ್ ರಾವ್ ಅಕ್ಯಯ್ ರಾವ್ ಆನಂದ್ ನಾಯಕ್ ಪದವು ಸಂಜೀವ ದೇವಾಡಿಗ ಸುಮಾ ಕೇಶವ್ ನೀತಾ ಆಚಾರ್ಯ ಭಾರತಿ ಅಮೀನ್ ಸುಬೀತ್ ಕೋಟ್ಯಾನ್ ರಾಜೇಂದ್ರ ದೇವಾಡಿಗ ಕೃಷ್ಣದಾಸ್ ಶೆಣೈ ಭರತ್ ಅಂಚನ್ ಶಿವಾಜಿ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರು, ಕ್ಷೇತ್ರದ ದಾನಿಗಳು ಹಾಗೂ ಹವಾಲ್ದಾರ್ ಬೆಟ್ಟು ಪರಿಸರದ ಜನತೆ ಪಾಲ್ಗೊಂಡಿದ್ದರು. ಕು. ನಳಿನಿ ಎಸ್. ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






















