
ಉಡುಪಿ: ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಗುರುವಾರ ಪೆರ್ಣಂಕಿಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದೇವಾಲಯಗಳು ಸರಕಾರದ ಕಪಿಮುಷ್ಠಿಯಲ್ಲಿವೆ. ಜೀರ್ಣೋದ್ಧಾರ ಇಲ್ಲ; ಪರಿಚಾರಕ ವರ್ಗಕ್ಕೆ ಸೂಕ್ತ ಸಂಭಾವನೆ ಇಲ್ಲ. ಭಕ್ತರ ಕಾಣಿಕೆ ಸದ್ವಿನಿಯೋಗ ಆಗುತ್ತಿಲ್ಲ. ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ಕುರಿತು ಬೇಸರ ವ್ಯಕ್ತಪಡಿಸಿದ ಶ್ರೀಗಳು ‘ಯಾರು ಕೂಡ ಬಹುಮತವನ್ನು ಕಡೆಗಣಿಸಬೇಡಿ. ಖರ್ಗೆಯವರು ಹೇಳಿಕೆ ಅವರ ಆಶಯ ತೆರೆದಿಟ್ಟಿದೆ. ಬಹುಮತದ ಎಲ್ಲರ ಭಾವನೆಯನ್ನು ನಾವು ಗೌರವಿಸಬೇಕು. ಯಾರನ್ನು ನೋಯಿಸಬಾರದು. ಇಂತಹ ಹೇಳಿಕೆ ಅವರ ಘನತೆಗೆ ತಕ್ಕುದಾದುದಲ್ಲ. ಕುಂಭಮೇಳದಲ್ಲಿ ಮಿಂದ ಮಂದಿ ಮೂರ್ಖರ? ಎಂದು ಪ್ರಶ್ನಿಸಿದ ಅವರು ರಾಜಕೀಯ ಪಕ್ಷಗಳು ಎಲ್ಲರೂ ಮತ ಭೇದ ಮರೆತು ಯಶಸ್ಸಿಗೆ ಕೈಜೋಡಿಸಿ ಒಮ್ಮನಸ್ಸಿನಿಂದ ಎಲ್ಲರೂ ವರ್ತನೆ ಮಾಡಬೇಕು” ಎಂದು ಹೇಳಿದರು.






























































































































