32.1 C
Udupi
Wednesday, May 6, 2026
spot_img
spot_img
HomeBlogಬಹುಮತಕ್ಕೆ ಕೊರತೆಯಿದ್ದ ಟಿವಿಕೆ ಜತೆ 'ಕೈ' ಜೋಡಿಸಿದ ಕಾಂಗ್ರೆಸ್

ಬಹುಮತಕ್ಕೆ ಕೊರತೆಯಿದ್ದ ಟಿವಿಕೆ ಜತೆ ‘ಕೈ’ ಜೋಡಿಸಿದ ಕಾಂಗ್ರೆಸ್

ಸಂಪುಟದಲ್ಲಿ 2 ಸ್ಥಾನಕ್ಕೆ ಬೇಡಿಕೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಸಾಧನೆ ಮಾಡಿದ ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಕಾಂಗ್ರೆಸ್ ಹೈಕಮಾಂಡ್ ಬೆಂಬಲ ನೀಡಲು ಮುಂದಾಗಿದೆ. ಈ ಬೆಳವಣಿಗೆಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ಮೈತ್ರಿ ಸಮೀಕರಣಗಳು ರೂಪುಗೊಂಡಿದ್ದು, ವಿಜಯ್ ಶೀಘ್ರದಲ್ಲೇ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಮೈತ್ರಿ ಚರ್ಚೆಗಳು ಮುಂದುವರಿದಿದ್ದು, ಹೊಸ ಸರ್ಕಾರದಲ್ಲಿ ಕಾಂಗ್ರೆಸ್‌ಗೆ ಎರಡು ಸಚಿವ ಸ್ಥಾನಗಳ ನಿರೀಕ್ಷೆಯಿದೆ. ಈ ಸಂಬಂಧ ಕಾಂಗ್ರೆಸ್ ನಾಯಕರು ಟಿವಿಕೆ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಈ ನಿರ್ಧಾರಕ್ಕೆ ಮುನ್ನ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದರೆ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆಯಂತೆ ರಾಜ್ಯದ ಹಿರಿಯ ನಾಯಕರ ಸಭೆಯ ನಂತರ ಅಂತಿಮ ಒಪ್ಪಿಗೆ ನೀಡಲಾಗಿದೆ.

234 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು 108 ಸ್ಥಾನಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಟಿವಿಕೆಗೆ ಕಾಂಗ್ರೆಸ್‌ನ 5 ಸದಸ್ಯರ ಬೆಂಬಲದಿಂದ ಬಲ 113ಕ್ಕೆ ಏರಿದೆ. ಇನ್ನೂ ಬಹುಮತಕ್ಕಾಗಿ ಇತರ ಪಕ್ಷಗಳ ಬೆಂಬಲವನ್ನು ಟಿವಿಕೆ ನಿರೀಕ್ಷಿಸುತ್ತಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮತ್ತು ಸಂವಿಧಾನವನ್ನು ಉಳಿಸಲು ಜಾತ್ಯತೀತ ಸರ್ಕಾರ ಅಗತ್ಯವೆಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ. ಮಾಜಿ ಸಿಎಂ ಕಾಮರಾಜ್ ಆದರ್ಶಗಳನ್ನು ವಿಜಯ್ ಉಲ್ಲೇಖಿಸಿರುವುದು ಮೈತ್ರಿಗೆ ಬಲ ನೀಡಿದೆ.

ಐತಿಹಾಸಿಕ ಗೆಲುವಿನ ಬಳಿಕ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಪ್ರತಿಕ್ರಿಯಿಸಿ, ಜನರ ಬೆಂಬಲಕ್ಕೆ ಧನ್ಯವಾದ. ಪ್ರಾರಂಭದ ವಿರೋಧಗಳನ್ನೂ ಮೀರಿ ಜನರ ವಿಶ್ವಾಸದಿಂದ ಈ ಸಾಧನೆ ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಈ ಜಯವು ಕೇವಲ ರಾಜಕೀಯ ಗೆಲುವಲ್ಲ, ಪ್ರಜಾಪ್ರಭುತ್ವದ ಗೆಲುವು ಎಂದಿರುವ ವಿಜಯ್, ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page