31.4 C
Udupi
Thursday, May 21, 2026
spot_img
spot_img
HomeBlogಬಕ್ರೀದ್ ಹಿನ್ನೆಲೆ: ಅಕ್ರಮ ಗೋ ಹತ್ಯೆ, ಸಾಗಾಟ ತಡೆಗಟ್ಟಲು ವಿಶ್ವಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ...

ಬಕ್ರೀದ್ ಹಿನ್ನೆಲೆ: ಅಕ್ರಮ ಗೋ ಹತ್ಯೆ, ಸಾಗಾಟ ತಡೆಗಟ್ಟಲು ವಿಶ್ವಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ವತಿಯಿಂದ ಆಗ್ರಹ

ಕಾರ್ಕಳ: ಮುಂಬರುವ ಮೇ 27ರ ಬುಧವಾರದಂದು ನಡೆಯಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ, ಕಾರ್ಕಳ ತಾಲೂಕಿನಲ್ಲಿ ಕುರ್ಬಾನಿ ಹೆಸರಿನಲ್ಲಿ ನಡೆಯುವ ಕಾನೂನು ಬಾಹಿರ ಗೋ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟವನ್ನು ಕಟ್ಟುನಿಟ್ಟಾಗಿ ತಡೆಹಿಡಿಯಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಕಳ ಪ್ರಖಂಡ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ, ಗೋ ವಂಶದ ಮೇಲಿನ ಹಿಂಸಾತ್ಮಕ ಕೃತ್ಯಗಳು ಹಾಗೂ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಕಸಾಯಿಖಾನೆಗಳ ವಿರುದ್ಧ ಸೂಕ್ತ ‘ಗೋ ಹತ್ಯೆ ಪ್ರತಿಬಂಧಕ ಕಾಯ್ದೆ’ಯನ್ವಯ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯು ಒತ್ತಾಯಿಸಿದೆ.ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಕೃತ್ಯಗಳುಹಿಂದೂಗಳು ಪೂಜಿಸುವ ಪವಿತ್ರ ಗೋಮಾತೆಯನ್ನು ಕಾನೂನು ಬಾಹಿರವಾಗಿ ಕದ್ದು ಕೊಂಡೊಯ್ಯುವ ಮತ್ತು ಹತ್ಯೆ ಮಾಡುವ ಘಟನೆಗಳು ಸಮಾಜದಲ್ಲಿ ಶಾಂತಿ ಕದಡಲು ಕಾರಣವಾಗುತ್ತಿವೆ. ಇಂತಹ ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗಿಕೊಳ್ಳುವವರ ವಿರುದ್ಧ ಪೊಲೀಸ್ ಇಲಾಖೆಯು ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಚೆಕ್ ಪೋಸ್ಟ್‌ಗಳ ಸ್ಥಾಪನೆಗೆ ಆಗ್ರಹಕಾರ್ಕಳ ತಾಲೂಕಿನ ಪ್ರಮುಖ ಭಾಗಗಳಾದ ತೆಳ್ಳಾರು, ಕೆರ್ವಾಶೆ, ಶಿರ್ಲಾಲು ಹಾಗೂ ಹೊಸ್ಮಾರು ಭಾಗಗಳಲ್ಲಿ ಅತ್ಯಧಿಕವಾಗಿ ಗೋವುಗಳ ಕಳ್ಳ ಸಾಗಾಣಿಕೆ ಕಂಡುಬರುತ್ತಿದ್ದು, ಈ ಕುರಿತು ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ.ಆದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಈ ಸೂಕ್ಷ್ಮ ಭಾಗಗಳಲ್ಲಿ ತಕ್ಷಣವೇ ಪೊಲೀಸ್ ಚೆಕ್ ಪೋಸ್ಟ್‌ಗಳನ್ನುನಿರ್ಮಿಸಬೇಕು. ಆ ಮೂಲಕ ಗೋ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟಕ್ಕೆ ಸಂಪೂರ್ಣವಾಗಿ ನಿಬಂಧ ಹೇರಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಕಳ ಪ್ರಖಂಡವು ಪೊಲೀಸ್ ಇಲಾಖೆಯನ್ನು ಪ್ರಬಲವಾಗಿ ಆಗ್ರಹಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page