ಜುಲೈ 13 ಆದಿತ್ಯವಾರ, ಬೆಳಿಗ್ಗೆ 10 ಗಂಟೆಗೆ

ದಿನಾಂಕ 13.07.2025 ನೇ ಆದಿತ್ಯವಾರದಂದು ಬೆಳಿಗ್ಗೆ 10 ಗಂಟೆಗೆ ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಶಾಖೆಯು ಬೆಲ್ಮಣ್ ನ ಸೂರಜ್ ಹಿಲ್ಸ್, ವನದುರ್ಗ ಕಮರ್ಷಿಯಲ್ ಕಾಂಪ್ಲೆಕ್ಸ್ನ ನಲ್ಲಿ ಶುಭಾರಂಭಗೊಳ್ಳಲಿದೆ.
ಇದರ ಉದ್ಘಾಟನಾ ಸಮಾರಂಭವು ಬೆಳ್ಮಣ್ ನ ಹೋಟೆಲ್ ಸೂರಜ್ ಇನ್ ಸಭಾಭವನದಲ್ಲಿ ನಡೆಯಲಿದ್ದು ಬೆಳ್ಮಣ್ ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ವಿಘ್ನೇಶ್ ಭಟ್ ಅವರು ಉದ್ಘಾಟಿಸಲಿದ್ದಾರೆ.
ಸಾಂದೀಪನೀ ಸಾಧನಾಶ್ರಮದ ಶ್ರೀ ಶ್ರೀ ಈಶವಿಠಲ ದಾಸ ಸ್ವಾಮೀಜಿಯವರು ಹಾಗೂ ಬೆಳ್ಮಣ್ ಚರ್ಚ್ ನ ಧರ್ಮ ಗುರುಗಳಾದ ರೆ. ಫಾ. ಫೆಡರಿಕ್ ಮಸ್ಕರೇನ್ಹಸ್ ಆಶೀರ್ವಚನ ನೀಡಲಿದ್ದು, ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಬಿ ಜಯಕರ್ ಶೆಟ್ಟಿ ಇಂದ್ರಾಳಿ ಅವರು ಭದ್ರತಾ ಕೊಠಡಿಯ ಉದ್ಘಾಟನೆ ಮಾಡಲಿದ್ದು ಶ್ರೀ ಸುಹಾಸ್ ಹೆಗ್ಡೆ ನಂದಳಿಕೆ ಅವರು ಗಣಕಯಂತ್ರ ಉದ್ಘಾಟನೆ ಮಾಡಲಿದ್ದಾರೆ.






























































































































