
ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಮಹಿಳಾ ಒಕ್ಕೂಟ, ಸಂಘಟನೆಗಳಿಂದ ಬರೋಬ್ಬರಿ 700ಜನ ಮಹಿಳೆಯರಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಕಳುಹಿಸಲಾಗಿದೆ.
ಹೆಚ್ ಡಿ ರೇವಣ್ಣರನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಮನವಿ ಮಾಡಿ ಅಖಿಲ ಭಾರತ ಸ್ತ್ರೀ ವಾದಿ ಒಕ್ಕೂಟ, ವುಮೆನ್ ಓಅರ್ ಡೆಮಾಕ್ರಸಿ ಸೇರಿ ಹಲವು ಸಂಘಟನೆಗಳು ಒಗ್ಗೂಡಿ ಪತ್ರ ಬರೆದಿದೆ.
ಅಧಿಕಾರ ಬಳಸಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ ತಮ್ಮ ಹುದ್ಧೆ ಮತ್ತು ಪ್ರಭಾವ ಬಳಸಿ ಈ ರೀತಿ ಮಾಡಲಾಗಿದ್ದು, ಈ ವಿಚಾರದಲ್ಲಿ ಪ್ರಧಾನಿಗಳ ಮೌನ ನೋಡಿ ಆಶ್ಚರ್ಯ ಆಗಿದೆ. ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಈ ರೀತಿ ಹಲವು ಹೈ ಪ್ರೊಫೈಲ್ ಕೇಸ್ ಗಳು ನಡೆದಿವೆ. ಎನ್ ಡಿಎ, ಬಿಜೆಪಿ ಮತ್ತು ಇತರ ಮೈತ್ರಿ ಪಕ್ಷಗಳ ಸದಸ್ಯರ ವಿರುದ್ಧ ಅನೇಕ ಕೇಸ್ ಗಳು ಇದೆ. ಈ ಪ್ರಕರಣಗಳಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ತೆಗೆದುಕೊಂಡಿದ್ದು ದುರ್ಬಲ ಕ್ರಮ. ಈಗ ಪ್ರಜ್ವಲ್ ರೇವಣ್ಣ ವಿರುದ್ಧ ಹಲವು ಆರೋಪಗಳಿವೆ. ಸುಮಾರು 2,976 ವಿಡಿಯೋಗಳಿವೆ ಎನ್ನಲಾಗ್ತಿದೆ. ಸಾಕಷ್ಟು ಪೆಂಡ್ರೈವ್ ಗಳ ಬಗ್ಗೆ ವಿಚಾರ ಬರ್ತಿದೆ. ಇಷ್ಟೆಲ್ಲಾ ಆಗ್ತಿದ್ರೂ ರಾಷ್ಟ್ರೀಯ ಮಹಿಳಾ ಆಯೋಗ ಮೌನವೇಕೆ? ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿ ಪ್ರಜ್ವಲ್ ವಿದೇಶಕ್ಕೆ ಹೋಗಿದ್ಹೇಗೆ? ಪ್ರಜ್ವಲ್ ರೇವಣ್ಣ ಬಗ್ಗೆ 2023ರಲ್ಲೇ ದೇವರಾಜೇಗೌಡ ಅವರು ದೂರು ಕೊಟ್ಟರೂ ಸಹ ಅವರಿಗೆ ಟಿಕೆಟ್ ಹೇಗೆ ಕೊಡಲಾಗಿದೆ? ಇಂತವರ ಪರ ಪ್ರಚಾರ ಮಾಡಿ ಪ್ರಧಾನಿ, ಗೃಹ ಸಚಿವರು ಏನು ಸಂದೇಶ ನೀಡಿದ್ದಾರೆ? ಎಂಬೆಲ್ಲಾ ಪ್ರಶ್ನೆಗಳ ಸುರಿಮಳೆ ಕೇಳಿದ್ದಾರೆ.


















































































