
ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣದಿಂದ ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡ ಕೆಲವೇ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿರ್ಜಲೀಕರಣ ಕಾರಣದಿಂದ ಮೂರ್ಛೆ ಹೋದ ಹಿನ್ನಲೆ ವಿನೇಶ್ರನ್ನ ಒಲಿಂಪಿಕ್ ವಿಲೇಜ್ನ ಪಾಲಿಕ್ಲಿನಿಕ್ನಲ್ಲಿ ದಾಖಲಿಸಲಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.ಆಗಸ್ಟ್ 6 ರಂದು ನಡೆದ ಕುಸ್ತಿ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಫೋಗಟ್ ಪಾತ್ರರಾಗಿದ್ದರು
50 ಕೆಜಿ ಕುಸ್ತಿ ಸ್ಪರ್ಧೆಯ ಫೈನಲ್ಗೂ ಮುನ್ನ ವಿನೇಶ್ ಫೋಗಟ್ ಅನರ್ಹಗೊಂಡಿದ್ದು, ದುರಾದೃಷ್ಟವಶಾತ್ ಭಾರತಕ್ಕೆ ಪದಕವೊಂದು ಕೈ ತಪ್ಪಿದೆ













