27 C
Udupi
Wednesday, July 29, 2026
spot_img
spot_img
HomeBlogತೆಲಿಕೆದ ತೆನಾಲಿ ತಂಡ, ಕಾರ್ಕಳ:'ರಾಯೆರುಲ್ಲೆರ್' – 'ರಾಯಾರಿದ್ದಾರೆ' ನಾಟಕಕ್ಕೆ ಶುಭ ಮುಹೂರ್ತ:ಶೀಘ್ರದಲ್ಲೇ ಪ್ರದರ್ಶನ

ತೆಲಿಕೆದ ತೆನಾಲಿ ತಂಡ, ಕಾರ್ಕಳ:’ರಾಯೆರುಲ್ಲೆರ್’ – ‘ರಾಯಾರಿದ್ದಾರೆ’ ನಾಟಕಕ್ಕೆ ಶುಭ ಮುಹೂರ್ತ:ಶೀಘ್ರದಲ್ಲೇ ಪ್ರದರ್ಶನ

ಕಾರ್ಕಳ: ಮಜಾಭಾರತ.ಬಲೆ ತೆಲಿಪಾಲೆ.v4 ಕಾಮಿಡಿ ಪ್ರೀಮಿಯರ್ ಲೀಗ್ ಚಾಂಪಿಯನ್ ಪ್ರಶಸ್ತಿ ವಿಜೇತ ತೆಲಿಕೆದ ತೆನಾಲಿ ತಂಡ, ಕಾರ್ಕಳ ಇವರ ಈ ವರ್ಷದ ನೂತನ ಕಲಾ ಕಾಣಿಕೆ ‘ರಾಯೆರುಲ್ಲೆರ್’ (ತುಳು) / ‘ರಾಯಾರಿದ್ದಾರೆ’ (ಕನ್ನಡ) ಭಕ್ತಿ ಪ್ರಧಾನ, ಸಾಂಸಾರಿಕ ಹಾಸ್ಯಮಯ ನಾಟಕದ ಶುಭ ಮುಹೂರ್ತವು ಗುರುಪೌರ್ಣಿಮೆಯಂದು ಶ್ರೀ ಗುರುರಾಘವೇಂದ್ರ ಮಠ, ತೆಳ್ಳಾರು ಇಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ತಂಡದ ಸಾರಥಿ ಸುನಿಲ್ ನೆಲ್ಲಿಗುಡ್ಡೆ, ನಾಟಕ ನಿರ್ದೇಶಕ ರಮಾನಂದ ನಾಯಕ್ (ಜೋಡುರಸ್ತೆ), ಸುಜಿತ್ ಕೋಟ್ಯಾನ್ (ನಿಟ್ಟೆ), ಲತೀಫ್ ಸಾಣುರ್, ಸಂಗೀತಗಾರ ವಿಶಾಕ್ ದೇವಾಡಿಗ, ವೈಶಾಕ್ ಆಚಾರ್ಯ (ಪದವು), ಯೋಗೀಶ್ ಶೆಟ್ಟಿ (ಕಲ್ಯಾ), ಸಂತೋಷ್ ಪಲಿಮಾರು, ಸುರೇಶ್ ಶೆಟ್ಟಿ (ಕುಕ್ಕುಂದೂರು), ಸಂದೇಶ್ ಕೋಟ್ಯಾನ್ (ಪೆರ್ವಾಜೆ), ಸುಜಯ್ ಶೆಟ್ಟಿ (ಮೂರೂರು), ವಿನಿಷಾ ಪೂಜಾರಿ (ಕಲ್ಯಾ), ಸುಜಯ್ ಚೇತನ ಹಳ್ಳಿ ಹಾಗೂ ದೀಪಾ ಪಾಲಿಜೆ ಉಪಸ್ಥಿತರಿದ್ದರು.

ಈ ನಾಟಕಕ್ಕೆ ಬಂಡಿಮಠ ಫೌಂಡೇಶನ್ ಹಾಗೂ ಸಮೃದ್ಧ್ ಎಂಟರ್‌ಪ್ರೈಸಸ್ ಪ್ರೋತ್ಸಾಹ ನೀಡಿವೆ.

ಈ ಕುರಿತು ಮಾತನಾಡಿದ ನಾಟಕ ರಚನೆಗಾರ ಸುನಿಲ್ ನೆಲ್ಲಿಗುಡ್ಡೆ ಹಾಗೂ ನಿರ್ದೇಶಕ ರಮಾನಂದ ನಾಯಕ್, “ಯಾವುದೇ ರಂಗ ಆಡಂಬರವಿಲ್ಲದೆ, ಶುದ್ಧ ಹಾಸ್ಯ, ಉತ್ತಮ ಕಥಾಹಂದರ ಮತ್ತು ಕಲಿಯುಗದ ಸಾಮಾಜಿಕ ಸನ್ನಿವೇಶದಲ್ಲಿ ಗುರು ರಾಯರ ಪವಾಡವನ್ನು ತೆರೆದಿಡುವ ವಿಭಿನ್ನ ಪ್ರಯತ್ನವೇ ‘ರಾಯೆರುಲ್ಲೆರ್’ (ತುಳು) / ‘ರಾಯಾರಿದ್ದಾರೆ’ (ಕನ್ನಡ) ನಾಟಕವಾಗಿದೆ” ಎಂದು ತಿಳಿಸಿದರು.

ನಾಟಕವು ಅತಿ ಶೀಘ್ರದಲ್ಲೇ ವಿವಿಧೆಡೆ ಪ್ರದರ್ಶನಗೊಳ್ಳಲಿದ್ದು, ಮುಂಗಡ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಪ್ರದರ್ಶನಕ್ಕಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 98454 39720

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page