
ಅಮರಾವತಿ: ತಿರುಪತಿ ಕಾಲ್ತುಳಿತ ದುರಂತದಿಂದಾದ ಸಾವು ನೋವು ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದ್ದು ಅದೇನೆಂದರೆ ಅತಿಥಿಗೃಹದಲ್ಲಿ 1ನೇ ಮಹಡಿ ಮೇಲಿಂದ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ.
ದೇವರ ದರ್ಶನಕ್ಕಾಗಿ ಕಡಪ ಜಿಲ್ಲೆಯ ಚಿನ್ನ ಚೌ ಗ್ರಾಮದಿಂದ ಕುಟುಂಬವು ಬಂದಿದ್ದು ಮಧ್ಯಾಹ್ನ 3:30 ರ ಸುಮಾರಿಗೆ ತನ್ನ ಸಹೋದರನೊಂದಿಗೆ ಆಟವಾಡುತ್ತಿದ್ದಾಗ ಬಾಲಕ ಮೂರನೇ ಸಂಖ್ಯೆಯ ವರಾಂಡಾ ಬಳಿಯ ಪದ್ಮನಾಭ ನಿಲಯದಲ್ಲಿ ಮೆಟ್ಟಿಲುಗಳ ಗ್ರಿಲ್ ಮೂಲಕ ಇದ್ದಕ್ಕಿದ್ದಂತೆ ಜಾರಿ ಬಿದ್ದಿದ್ದಾನೆ. ಘಟನೆಯ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





















