
ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಕಳ ನ್ಯಾಯವಾದಿಗಳ ಸಂಘ (ರಿ.) ಕಾರ್ಕಳ ಕೆ.ಪಿ.ಎಸ್. ವಿದ್ಯಾಸಂಸ್ಥೆ ಮುನಿಯಾಲು ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವು ದಿನಾಂಕ 09-11-2024 ಬೆಳಿಗ್ಗೆ 11.30 ಗಂಟೆಗೆ ಕೆ.ಪಿ.ಎಸ್. ವಿದ್ಯಾಸಂಸ್ಥೆ ಮುನಿಯಾಲಿನಲ್ಲಿ ಬೇಬಿ ಶೆಟ್ಟಿ ಕೆ.ಪ್ರಾಂಶುಪಾಲರು, ಕೆ.ಪಿ.ಎಸ್.ವಿದ್ಯಾಸಂಸ್ಥೆ, ಮುನಿಯಾಲು ಇವರ ಅದ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೋಮಲ ಆರ್.ಸಿ.ಗೌರವಾನ್ವಿತ ಪ್ರಧಾನ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶರು, ಕಾರ್ಕಳ ನಡೆಸಿದರು.ಮುಖ್ಯ ಅತಿಥಿಗಳಾಗಿ ಹರೀಶ್ ಪೂಜಾರಿಉಪಾಧ್ಯಕ್ಷರು, ಎಸ್.ಡಿ.ಎಮ್.ಸಿ. ಕೆ.ಪಿ.ಎಸ್. ವಿದ್ಯಾ ಸಂಸ್ಥೆ, ಮುನಿಯಾಲು.ಗೋಪಿನಾಥ ಭಟ್,ಸದಸ್ಯರು, ಎಸ್.ಡಿ.ಎಮ್.ಸಿ. ಕೆ.ಪಿ.ಎಸ್. ವಿದ್ಯಾ ಸಂಸ್ಥೆ, ಮುನಿಯಾಲು. ವಿ. ಸುರೇಶ್ ಪೂಜಾರಿ ನ್ಯಾಯವಾದಿಗಳು ಕಾರ್ಕಳ,ಸಂಪನ್ಮೂಲ ವ್ಯಕ್ತಿ ಶಿಲ್ಪನ್ಯಾಯವಾದಿಗಳು ಕಾರ್ಕಳ ಉಪಸ್ಥಿತರಿದ್ದರು




















