ಮಾನವೀಯ ಮೌಲ್ಯದ ಉಳಿವು ಹೇಗೆ …?

ಅರಮನೆ ಇಲ್ಲದೇ ಹೋದರೂ ಅರೆ(ಅರ್ಧ)ಮನಸ್ಸು ಇರಬಾರದಂತೆ! ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ವಿಶ್ವಾಸ, ಪ್ರೀತಿ,ಸತ್ಯ, ಪ್ರಾಮಾಣಿಕತೆ, ಒಳ್ಳೆಯತನ ತುಂಬಿರಬೇಕಂತೆ.. ಇಂದಿನ ದಿನಮಾನಗಳಲ್ಲಿ ಮಾನವೀಯ ಸಂಬಂಧಗಳು ಕಡಿಮೆಯಾಗುತ್ತಿವೆ ಎನ್ನುವ ಮಾತು ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತದೆ, ಮನುಷ್ಯರಾಗಿ ಒಬ್ಬರಿಂದ ಒಬ್ಬರಿಗೆ ಪ್ರೀತಿ, ಕನಿಕರ, ಬಡವ ಶ್ರೀಮಂತ ಎನ್ನುವ ಭೇದಭಾವವಿಲ್ಲದ ನಾವೆಲ್ಲರೂ ಒಂದೇ ಎನ್ನುವ ಮನಸ್ಸು ನೋಡಲು ಸಿಗುವುದೇ ಅಪರೂಪವಾಗಿದೆ, ಹಾಗಾಗಿಯೇ ನಮ್ಮ ಇಂದಿನ ಬದುಕು ಯಾ0ತ್ರಿಕವಾಗಿ, ವ್ಯಾವಹಾರಿಕವಾಗಿ, ಹಣ ಆಸ್ತಿ ಗಳಿಕೆಯಲ್ಲಿಯೇ ಮುಗಿದು ಹೋಗುತ್ತಿದೆ,ನಾವು ಮನುಷ್ಯತ್ವವನ್ನು, ಮಾನವೀಯ ಮೌಲ್ಯಗಳನ್ನು ಹೇಗೆ ಉಳಿಸಿಕೊಳ್ಳಬೇಕು, ನಮ್ಮ ಬದುಕಿನ ಅಂದ ಚಂದವನ್ನು, ವ್ಯಕ್ತಿತ್ವ ವಿಕಸನವನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಅನ್ನುವ ನಿಟ್ಟಿನಲ್ಲಿ ನಿಮ್ಮ ನಿಮ್ಮ ಆಲೋಚನೆ, ಅಭಿಪ್ರಾಯಗಳನ್ನು ಲೇಖನದ ಮೂಲಕ ಬರೆದು ಕಳುಹಿಸಿ.
” ಮಾನವೀಯ ಸಂಬಂಧದ ಉಳಿವು ಹೇಗೆ?
ಟೀಮ್ ಜೇನುಗೂಡು ವತಿಯಿಂದ ನಡೆಯುವ ಲೇಖನ ಸ್ಪರ್ಧೆಯಲ್ಲಿ ನೀವು ಕೂಡ ಭಾಗವಹಿಸಿ, ಆಯ್ಕೆಯಾದ ಅತ್ಯುತ್ತಮ ಬರಹಗಳಿಗೆ ಸೂಕ್ತ ಬಹುಮಾನಗಳಿವೆ.














