28.8 C
Udupi
Wednesday, May 6, 2026
spot_img
spot_img
HomeBlogಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳದಲ್ಲಿ ಶ್ರೀ ರಾಮ ತಾರಕ ಜಪಯಜ್ಞ

ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳದಲ್ಲಿ ಶ್ರೀ ರಾಮ ತಾರಕ ಜಪಯಜ್ಞ


ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿಯ ಪುನರ್ ಪ್ರತಿಷ್ಠಾಪನೆಯ ಪ್ರಥಮ ವಾರ್ಷಿಕೋತ್ಸವದಂದು ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀರಾಮ ತಾರಕ ಜಪಯಜ್ಞ ವಿದ್ಯುಕ್ತವಾಗಿ ನಡೆಯಿತು. ಮೊದಲು ನಡೆದ ಧಾರ್ಮಿಕ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ದೀಪ ಪ್ರಜ್ವಲಿಸುವುದರ ಮೂಲಕ ಚಾಲನೆ ನೀಡಿದರು. ನಾವೆಲ್ಲರೂ ಒಳಿತು ಮತ್ತು ಕೆಡುಕು ಗುಣಗಳನ್ನೊಳಗೊಂಡವರು. ಮಂಥರೆಯು ಸ್ವಭಾವತಹ ಕೆಟ್ಟವಳಲ್ಲ. ರಾಮನ ರಾಜಕೀಯ ಇಂದಿನ ರಾಜಕೀಯದಂತಲ್ಲ. ತನಗೆ ಕಷ್ಟವನ್ನು ತಂದುಕೊಂಡು ಇತರರಿಗೆ ಒಳ್ಳೆಯದು ಮಾಡುವ ರಾಜಕೀಯ ಅವನದು. ರಾಮಾಯಣ ನಮಗೆ ಒಳ್ಳೆಯ ಪಾಠಗಳನ್ನು ಕಲಿಸುತ್ತದೆ. ರಾಮಾಯಣದ ಅಧ್ಯಯನ ನಮ್ಮ ಜೀವನವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ರಾಮ ರಾಷ್ಟ್ರ ಹಿತಕ್ಕಾಗಿ ಕಷ್ಟ ತಂದು ಕೊಳ್ಳುತ್ತಾನೆ. ಸಮಾಜಕ್ಕೆ ಹಿತವಾಗಬೇಕೆಂಬುದು ರಾಮಾಯಣದ ಅಂಶ. ಜೇಸೀಸ್ ಶಾಲೆಯ ಮಕ್ಕಳು ಒಳ್ಳೆಯ ಸಂಸ್ಕಾರವನ್ನು ಕಲಿಯುತ್ತಿದ್ದಾರೆ ಎಂದರು.


ವಿದ್ವಾನ್ ವಾಸುದೇವ ಉಪಾಧ್ಯಾಯರು ಮಾತನಾಡುತ್ತಾ, ಪ್ರಹ್ಲಾದನ ಜೀವನ ಮೌಲ್ಯಗಳನ್ನು ತಿಳಿಸುತ್ತಾ, ಈ ಶಾಲೆ ಪ್ರಹ್ಲಾದನ ಶಾಲೆಯಂತಿದೆ. ಇಲ್ಲಿ ಎಲ್ಲವೂ ಒಳ್ಳೆಯದಿರುತ್ತದೆ. ಚಿಕ್ಕವರಿದ್ದಾಗ ಒಳ್ಳೆಯ ಸಂಸ್ಕಾರ ಕಲಿಯಬೇಕು. ದೇಶದ ಸಂಸ್ಕೃತಿಯನ್ನು ಉಳಿಸಿ, ಈ ಶಾಲೆ ಒಳ್ಳೆಯ ಬೆಳಕು ಕೊಟ್ಟ ಶಾಲೆ. ಇದು ಇನ್ನೂ ಉತ್ತಮ ಕೀರ್ತಿಗಳಿಸಲಿ ಎಂದರು.
ವಿದ್ವಾನ್ ನಾರಾಯಣ ಭಟ್ ರವರು, ನಮ್ಮ ಜೀವನದಲ್ಲಿ ವಿದ್ಯೆ ಇಲ್ಲದಿದ್ದರೆ ಯಾವುದಕ್ಕೂ ಪ್ರಯೋಜನವಿಲ್ಲ. ಎಲ್ಲರೂ ಶಾಲೆಗೆ ಬಂದು ಕೀರ್ತಿಯನ್ನು ಪಡೆಯಬೇಕು. ವಿದ್ಯಾರ್ಥಿಗಳ ಜೀವನ ಈ ಶಾಲೆಯ ಮೂಲಕ ಬೆಳಗಲಿ ಎಂದರು.
ಪ್ರಧಾನ ಅರ್ಚಕರಾದ ಅಶೋಕ್ ಕಾರಂತ ಇವರು ಶ್ರೀರಾಮ ತಾರಕ ಜಪ ಯಜ್ಞವನ್ನು ವಿದ್ಯುಕ್ತವಾಗಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿಯವರು, ಕಾರ್ಯದರ್ಶಿ ಡಾ/ ಮುರಳೀಧರ ಭಟ್, ಕೋಶಾಧಿಕಾರಿ ಜೇಸಿ ದಿನೇಶ್ ಕೆ, ಸದಸ್ಯರಾದ ಜಯ ಕುಮಾರ್, ಶಾಲಾ ಆಡಳಿತ ಮಂಡಳಿಯವರು, ಜೇಸಿಐ ಕಾರ್ಕಳದ ಅಧ್ಯಕ್ಷೆ ಶ್ರೀಮತಿ ಶ್ವೇತಾ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್ ರವರು, ಶ್ರೀ ಕಜಂಪಾಡಿ ಸುಬ್ರಮಣ್ಯ ಭಟ್, ವಿದ್ವಾನ್ ವಾಸುದೇವ ಉಪಾಧ್ಯಾಯ, ವಿದ್ವಾನ್ ನಾರಾಯಣ ಭಟ್, ವಿದ್ವಾನ್ ನರಸಿಂಹ ತಂತ್ರಿಗಳು, ವಿದ್ವಾನ್ ನಾರಾಯಣ ವೈಲಾಯರು, ವಿದ್ವಾನ್ ತಾರ ಪ್ರಸಾದ್ ಕೆದ್ಲಾಯರು, ವಿದ್ವಾನ್ ವರದರಾಜ ತಂತ್ರಿಗಳು, ಶ್ರೀಯುತ ಶಂಕರನಾರಾಯಣ ಭಟ್ ಇವರು ಉಪಸ್ಥಿತರಿದ್ದರು.
ಯಜ್ಞದ ಮೊದಲು ಮಕ್ಕಳು ಗುರುವಂದನಾ ಕಾರ್ಯಕ್ರಮ ನಡೆಸಿಕೊಟ್ಟರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page