
ಜೆ.ಇ.ಇ (ಬಿ.ಆರ್ಕ್ ) ವಿದ್ಯಾರ್ಥಿಗಳಿಗೆ ಜನವರಿಯಿಂದ ಏಪ್ರಿಲ್ ವರೆಗೆ ನಡೆದ ಜೆ.ಇ.ಇ (ಬಿ. ಆರ್ಕ್ ) ಪರೀಕ್ಷೆಯಲ್ಲಿ ಆಳ್ವಾಸ್ ಪಿ ಯು ಕಾಲೇಜಿನ ವಿದ್ಯಾರ್ಥಿ ಅನುಷ್ ಅರುಣ್ ಕೆ ಯವರು, ರಾಷ್ಟ್ರ ಮಟ್ಟದಲ್ಲಿ 443 ನೇ ರ‍್ಯಾಂಕ್ ಪಡೆಯುವ ಮೂಲಕ ಅದ್ಭುತ ಸಾಧನೆ ಗೈದಿದ್ದಾರೆ.

ಇವರು ಅರುಣ್ ಕುಮಾರ್ ನಿಟ್ಟೆ – ಸಂಗೀತ ದಂಪತಿಗಳ ಪುತ್ರ.ಜೆಇಇ ಮೇನ್ ಬಿ.ಆರ್ಕ್ ಪರೀಕ್ಷೆಯು ಐಐಟಿ , ಎನ್‌ಐಟಿ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬ್ಯಾಚುಲರ್ ಆಫ್ ಆರ್ಕಿಟೆಕ್ಟರ್ ಕೋರ್ಸ್‌ಗೆ ಪ್ರವೇಶ ಪಡೆಯಲು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಾಗಿದೆ.





















