
ಕಾರ್ಕಳ: ತಾಲೂಕಿನ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಲಿಕದ ವಾರ್ಷಿಕ ಮಹೋತ್ಸವವು ಜನವರಿ 26ರಿಂದ 30ರವರೆಗೆ ನಡೆಯಲಿದ್ದು ಉಡುಪಿ ಧರ್ಮಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ ಪ್ರಧಾನ ಯಾಜಕರಾಗಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಿದ್ದಾರೆ.
ಜನವರಿ 26ರಂದು ಬೆಳಗ್ಗೆ 10.30 ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿ ಪೂಜೆ ನಡೆಯಲಿದ್ದು ಜನವರಿ 27ರಂದು ಉಡುಪಿ ಶ್ರೇಷ್ಠ ಧರ್ಮಗುರು ಅ.ವಂ. ಫರ್ಡಿನಾಡ್ ಗೋನ್ಸಾಲ್ವಿಸ್ ಅವರಿಂದ ಬೆಳಗ್ಗೆ 10 ಗಂಟೆಗೆ ಮಹೋತ್ಸವದ ಬಲಿ ಪೂಜೆ ನಡೆಯಲಿದೆ. ಜನವರಿ 28ಕ್ಕೆ ಬೆಳ್ತಂಗಡಿ ಧರ್ಮಾದ್ಯಕ್ಷ ಪರಮ ಪೂಜ್ಯ ಲಾರೆನ್ಸ್ ಮುಕ್ಕುಜೀ ಅವರು ಸಾಯಂಕಾಲ 5:30ಕ್ಕೆ ಬಲಿ ಪೂಜೆ ನೆರವೇರಿಸಲಿದ್ದು ಜನವರಿ 29ರಂದು ಮಂಗಳೂರು ನಿವೃತ್ತ ಧರ್ಮಾದ್ಯಕ್ಷ ಪರಮಪೂಜ್ಯ ಆಲೋಶಿಯಸ್ ಪಾವ್ಲ್ ಸೋಜ್ ಬೆಳಗ್ಗೆ 10 ಗಂಟೆಗೆ ಬಲಿ ಪೂಜೆ ನೆರವೇರಿಸಲಿದ್ದಾರೆ. ಇನ್ನು ಜನವರಿ 30ರಂದು ಬಾರುಯಿಪುರ್ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಸಾಲ್ವದೊರ್ ಲೋಬೋ ಬೆಳಗ್ಗೆ 10 ಗಂಟೆಗೆ ಬಲಿ ಪೂಜೆ ನಡೆಸಲಿದ್ದಾರೆ.































































































































