
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ
ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ
ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಒಳಾಂಗಣ
ಕ್ರೀಡಾಂಗಣದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಶಟಲ್
ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಶಾಲೆಯ ಬಾಲಕಿಯರ ತಂಡ ಹಾಗೂ ಪ್ರೌಢಶಾಲೆಯ ಬಾಲಕರ ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿವೆ. ಪ್ರಾಥಮಿಕ ಶಾಲಾ ಬಾಲಕಿಯರ ತಂಡವನ್ನು
ಪ್ರತಿನಿಧಿಸಿದ್ದ ಎಂಟನೇ ತರಗತಿಯ ಖುಷಿ ಶೆಟ್ಟಿ, ವಿಶ್ಮಿತಾ, ಆರನೇ
ತರಗತಿಯ ತ್ರಿಷ್ಮ ಎಸ್ ಹಾಗೂ ಕೆಟ್ಲಿನ್ ಏಂಜೆಲ್ ಪಿಂಟೊ ಜಿಲ್ಲಾ
ಮಟ್ಟಕ್ಕೆ ಆಯ್ಕೆಯಾದರೆ ಪ್ರೌಢಶಾಲಾ ಬಾಲಕರ ತಂಡವನ್ನು
ಪ್ರತಿನಿಧಿಸಿದ್ದ ಹತ್ತನೇ ತರಗತಿಯ ಗೌರವ್ ಆರ್, ಪ್ರಥಮ್
ಶೆಟ್ಟಿ, ಶೋಭಿತ್ ಕೆ ಎಚ್ ಹಾಗೂ ಅಚ್ಚು ವಿದ್ಯೋಪಾರ್ಜ್
ಗುರುಕುಲಂ ಮತ್ತು ಒಂಬತ್ತನೇ ತರಗತಿಯ ಗ್ಯಾಲ್ವಿನ್
ಜೋಯಲ್ ಪಿಂಟೊ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್, ಪ್ರಕಾಶ್
ನಾಯ್ಕ್ ಹಾಗೂ ಕು.ಲಾವಣ್ಯ ತಂಡಗಳ ನೇತೃತ್ವ ವಹಿಸಿದ್ದರು.































































































































