
ಕಾರ್ಕಳ: ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ, ಬೆಳುವಾಯಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಕೊಳಕೆ ಇರ್ವತ್ತೂರಿನ ಭಾಸ್ಕರ್ ಎಸ್ ಕೋಟ್ಯಾನ್ ಅವರಿಗೆ ಕರ್ನಾಟಕ ಸರ್ಕಾರವು ನವೆಂಬರ್ 14ರಂದು ಸಹಕಾರ ರತ್ನ ಪ್ರಶಸ್ತಿ ನೀಡುತ್ತಿದೆ.
ಭಾಸ್ಕರ್ ಎಸ್ ಕೋಟ್ಯಾನ್ ಅವರು ಸಹಕಾರಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ವಿಶ್ವ ಹಿಂದೂ ಪರಿಷತ್ ಕಾರ್ಕಳ ಅಧ್ಯಕ್ಷರಾಗಿ, ಮೂಡುಬಿದರೆ ಭಾರತ ಸೌಹಾರ್ದ ಕ್ರೆಡಿಟ್ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ, ಆನೆಕೆರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಮಂಗಳೂರು ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಕಂಬಳ ಕೋಣಗಳ ಯಜಮಾನರಾಗಿರುವ ಭಾಸ್ಕರ್ ಎಸ್ ಕೋಟ್ಯಾನ್ ಅವರು ರಾಜ್ಯ ಕಂಬಳ ಸಮಿತಿ ಸದಸ್ಯರಾಗಿ ಮತ್ತು ಜಿಲ್ಲಾ ಕಂಬಳ ಶಿಸ್ತು ಸಮಿತಿ ಅಧ್ಯಕ್ಷರಾಗಿದ್ದಾರೆ.






























































































































