
ಕಾರ್ಕಳ : ಫೆ.16 ರಂದು ಶ್ರೀ ಅನಂತಶಯನ ಮಹಿಳಾ ತಂಡ ಇವರಿಂದ ಶ್ರೀ ವಿಷ್ಣು ಹಾಗೂ ಶೀ ಲಲಿತ ಸಹಸ್ರನಾಮ ಪಾರಾಯಣದ ರಜತ ಮಹೋತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳು ನಡೆಯಲಿದೆ.
ಬೆಳಗ್ಗೆ 7:30 ರಿಂದ ಕಾರ್ಕಳದ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದು ಬೆಳಗ್ಗೆ 10 ಗಂಟೆಯಿಂದ “ಶ್ರೀಮತಿ ವಿಜಯಲಕ್ಷ್ಮಿ ರಾಜಗೋಪಾಲ್ ಆಚಾರ್” ವೇದಿಕೆಯಲ್ಲಿ ಪ್ರವಚನ, ಸತ್ಸಂಗ ಮತ್ತು ಗೀತಾ ಪಠಣ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮಂಗಳೂರು ಶ್ರೀರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮೀಜಿ ಶ್ರೀ ಶ್ರೀ ಜಿತಕಾಮಾನಂದಾಜಿ, ಪೊಳಲಿಯ ರಾಮಕೃಷ್ಣ ತಪೋವನದ ಪೂಜ್ಯ ಸ್ವಾಮೀಜಿ ಶ್ರೀ ಶ್ರೀ ವಿವೇಕ ಚೈತನ್ಯಾನಂದಜಿ, ವಿದ್ವಾನ್ ಡಾ. ಸೋಂದ ಭಾಸ್ಕರ್ ಭಟ್ ಕಟೀಲು, ಕಾರ್ಕಳದ ಶ್ರೀ ಅನಂತಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ| ವೇದಮೂರ್ತಿ ಶಂಕರನಾರಾಯಣ ಭಟ್, ಮಂಗಳೂರಿನ ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಡಾ| ಆಶಾ ಜ್ಯೋತಿ ರೈ ಮಾಲಾಡಿ ಪಾಲ್ಗೊಳ್ಳಲಿದ್ದಾರೆ.



















