
ಕಾರ್ಕಳ: ಆನೆಕೆರೆಯ ಕೃಷ್ಣ ಮಂದಿರ ಬಳಿ ಇರುವ ಸದಾ ಕುಶನ್ ಅಂಗಡಿಯಲ್ಲಿ, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ.
ಅವಘಡದಲ್ಲಿ 10 ಲಕ್ಷ ರೂಪಾಯಿಯಷ್ಟು ವಸ್ತುಗಳು ಹಾನಿಗೊಳಗಾಗಿವೆ. ಎಂದು ಅಂದಾಜಿಸಲಾಗಿದೆ. ಕಾರ್ಕಳ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ. ಸದಾನಂದ ನಕ್ರೆ ಎಂಬವರಿಗೆ ಸೇರಿದ ಅಂಗಡಿ ಇದಾಗಿದೆ.





















