
ಕಾರ್ಕಳ ತಾಲೂಕು ಮಾಳ ಗ್ರಾಮದ ಶ್ರೀ ಗುರುಕುಲ ಶಾಲೆಯಲ್ಲಿ ಸೆ 7 ರಂದು 55 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಯಿತು ಬೆಳಗ್ಗೆ ವಿಗ್ರಹ ಪ್ರತಿಷ್ಠಾಪನೆ ಯೊಂದಿಗೆ ಶುಭಾರಂಭ ಗೊಂಡು ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಮಧ್ಯಾಹ್ನ ಅನ್ನದಾನದ ನಂತರ ಸಭಾ ಕಾರ್ಯಕ್ರಮ ನಡೆಯಿತು.
ಸಭಾಧ್ಯಕ್ಷತೆಯನ್ನ ಸಮಿತಿಯ ಅಧ್ಯಕ್ಷರಾದ ರಾಮ ಸೇರಿಗಾರ್ ಮುಖ್ಯ ಅತಿಥಿಯಾಗಿ ವೈಧ್ಯಾಧಿಕಾರಿ ಡಾ.ದಿಶಾ ಕಿಶನ್ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಧಾರ್ಮಿಕ ಪ್ರವಚನ ಗಜಾನನ ಮರಾಠೆ ಡಾ ಸತ್ಯನಾರಾಯಣ ಭಟ್ ಶಂಕರ ನಾಯಕ್ ಸಮಿತಿಯ ಗೌರವಾಧ್ಯಕ್ಷರಾದ ಹರೀಶ್ಚಂದ್ರ ತೆಂಡೂಲ್ಕರ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ನಿರೂಪಣೆ ಕಾರ್ಯದರ್ಶಿಯಾದ ರಘುಪತಿ ಕಾಮತ್ ಹಾಗೂ ಸ್ವಾಗತವನ್ನು ಅಕ್ಷತ್ ಕುಮಾರ್ ಮತ್ತು ಸುಧಿಶ್ ಶೆಟ್ಟಿಯವರ ಪ್ರಾಸ್ತಾವಿಕ ದೊಂದಿಗೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಕಿರಣ್ ಸುವರ್ಣ ಇವರ ಧನ್ಯವಾದದೊಂದಿಗೆ ಸಮಿತಿಯ ಸರ್ವ ಸದಸ್ಯರ ಸಹಕಾರದೊಂದಿಗೆ ಭಗವದ್ಭಕ್ತರ ಕೊಡುವಿಕೆಯಲ್ಲಿ ವಿಜ್ರಂಭಣೆಯ ಮೆರವಣಿಗೆಯಲ್ಲಿ ಗಣಪತಿ ದೇವರ ಜಲಾಧಿವಾಸ ನಡೆಯಿತು.













