
ಕಾರ್ಕಳ : ಪುರಸಭೆಯ ನೂತನ ಅಧ್ಯಕ್ಷರಾಗಿ ಯೋಗೀಶ್ ದೇವಾಡಿಗ,ಉಪಾಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆಯಾಗುವ ಮೂಲಕ ಮತ್ತೆ ಕಾರ್ಕಳ ಪುರಸಭೆ ಬಿಜೆಪಿ ತೆಕ್ಕೆಗೆ ಬಂದಿದೆ.
ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಗುರುವಾರ ನಡೆದಿದ್ದು ತಹಶೀಲ್ದಾರ್ ಪ್ರತಿಭಾ ಆರ್.ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
23 ವಾಡ್೯ ನ 23 ಪುರಸಭಾ ಸದಸ್ಯ ಬಲ ಹೊಂದಿರುವ ಕಾರ್ಕಳ ಪುರಸಭೆಯಲ್ಲಿ ಈ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಘೋಷಿಸಲಾಗಿತ್ತು. ಒಟ್ಟು 11 ಮಂದಿ ಬಿಜೆಪಿ, 11 ಮಂದಿ ಕಾಂಗ್ರೆಸ್ ಹಾಗೂ ಒರ್ವರು ಪಕ್ಷೇತರ ಸದಸ್ಯರು ಹೊಂದಿದ್ದು ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಸ್ಥಾನಕ್ಕೆ
ಪ್ರಶಾಂತ್ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದರು ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಶುಭದ ರಾವ್, ಉಪಾಧ್ಯಕ್ಷ ಸ್ಥಾನಕ್ಕೆ ವಿನ್ನಿ ಬೋಲ್ಡ್ ನಾಮಪತ್ರ ಸಲ್ಲಿಸಲಾಗಿತ್ತು. ಬಿಜೆಪಿ, ಕಾಂಗ್ರೆಸ್ ಸಮ
ಬಲದ ಸ್ಥಾನ ಹೊಂದಿರುವ ಕಾರಣ ಪಕ್ಷೇತರ ಸದಸ್ಯ
ಲಕ್ಷ್ಮೀನಾರಾಯಣ ಮಲ್ಯ ಕಿಂಗ್ ಮೇಕರ್ ಆಗಬೇಕಿತ್ತು. ಆದರೆ,ಅವರು ಮತ ಚಲಾವಣೆ ಅನುಪಸ್ಥಿತಿಯಲ್ಲಿದ್ದ ಕಾರಣ ಅವರ ಮತ ಚಲಾವಣೆಯಾಗಿಲ್ಲ ಜೊತೆಗೆ ಅದ್ಯಕ್ಷ ಹಾಗೂ ಉಪಾಧ್ಯಕ್ಷರ ಅಯ್ಕೆಯಲ್ಲಿ ಯಾವುದೇ ಪರಿಣಾಮವು ಬೀರಿಲ್ಲ. ಇನ್ನು ಅಧ್ಯಕ್ಷ-
ಉಪಾಧ್ಯಕ್ಷರ ಆಯ್ಕೆಯಲ್ಲಿ ಶಾಸಕ, ಸಂಸದರ ಮತದಾನದ ಅವಕಾಶ ಇರುವುದರಿಂದ ಅವರ ಮತವೇ ನಿರ್ಣಾಯಕವಾಗಿತ್ತು. ಹೀಗಾಗಿ 13 ಮತಗಳೊಂದಿಗೆ ಬಿಜೆಪಿ
ಸದಸ್ಯರೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.
ಈ ಬಾರಿ ಮತ್ತೆ ಬಿಜೆಪಿ ಅಡಳಿತ ನಡೆಸಲಿದೆ.













