
ಕಾರ್ಕಳ: 2023ರ ಫೆಬ್ರವರಿ 1ರಿಂದ ಇಲ್ಲಿಯವರೆಗೆ ಕಾರ್ಕಳದ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸಿದ ಅರವಿಂದ್ ಕಲಗುಜ್ಜಿ ಅವರು ವರ್ಗಾವಣೆಯಾಗಿ ಹೊಸ ಎಎಸ್ ಪಿ ಆಗಿ ಡಾ. ಹರ್ಷ ಪ್ರಿಯಂವದ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
2023ರ ಫೆಬ್ರವರಿ 1ರಂದು ಕಾರ್ಕಳದ ಡಿವೈಎಸ್ಪಿ ಆಗಿ ಅಧಿಕಾರ ವಹಿಸಿಕೊಂಡ ಅರವಿಂದ್ ಎನ್ ಕಲಗುಜ್ಜಿ ಇದೀಗ ವರ್ಗಾವಣೆಯಾಗುತ್ತಿದ್ದು ಮೂಲತಃ ಜಾರ್ಖಂಡ್ ನ ಧನ್ಭಾದ ಜಿಲ್ಲೆಯ ಡಾ. ಹರ್ಷ ಪ್ರಿಯಂವದ ಲೋಕ ಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 165 ನೇ ರಾಂಕ್ ಪಡೆದು ಇದೀಗ ಕಾರ್ಕಳದ ನೂತನ ಎಎಸ್ ಪಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಡಾ. ಹರ್ಷ ಪ್ರಿಯಂವದ ಅವರು 2018ರಲ್ಲಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಶಿಕ್ಷಣ ಪೂರೈಸಿದ್ದಾರೆ.








































