
ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಮಣ್ ಇವರ ಸಂಯುಕ್ತ ಆಶಯದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪಿಯುಸಿ ವಿಭಾಗದ ಬಾಲಕ – ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಎಸ್. ವಿ. ಟಿ. ವನಿತಾ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ತಂಡದಲ್ಲಿ ಉತ್ತಮ ಬೆಂಬತ್ತುಗಾರ್ತಿಯಾಗಿ ಕು. ಸಾಕ್ಷಿ ಹಾಗೂ ಸವ್ಯಸಾಚಿ ಆಟಗಾರ್ತಿಯಾಗಿ ಕು. ದೀಪಿಕಾ ಆಯ್ಕೆಯಾಗಿರುತ್ತಾರೆ.
ಕ್ರೀಡಾಪಟುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರಭಾವತಿ ಹೆಗ್ಡೆ, ಹಾಗೂ ಕೋಚ್ ದಿನೇಶ್ ಹಾಗೂ ಕೀರ್ತನ್ ತರಬೇತಿ ನೀಡಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಿರಿಯ ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.































































































































