
ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕಾರ್ಕಳ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ 2024ನೇ ಸಾಲಿನ ಕಾರ್ಕಳ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ- ಬಾಲಕಿಯರ ತ್ರೋಬಾಲ್ ಪಂದ್ಯಾಟ ಕಾರ್ಕಳ ಜ್ಞಾನಸುಧಾ ಆಂಗ್ಲ ಪ್ರೌಢಶಾಲೆಯಲ್ಲಿ ದಿನಾಂಕ 11-09-2024ರಂದು ನಡೆಯಿತು.ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀನಾರಯಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆರೋಗ್ಯವಾದ ದೇಹಕ್ಕೆ ಗಾಳಿ, ಆಹಾರ, ನೀರಿನಂತೆ ಕ್ರೀಡೆಯೂ ಕೂಡ ಮುಖ್ಯ ಪಾತ್ರವಹಿಸುತ್ತದೆ ಹಾಗೂ ಕ್ರೀಡೆಯು ಜೀವನದ ದಾರಿದೀಪವಾಗಬೇಕು ಎಂದು ನುಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಬಿ.ಎ. ಅವರು ನೋಡಿ ತಿಳಿಯುವುದಕ್ಕಿಂತ ಮಾಡಿ ಕಲಿಯುವ ಶಿಕ್ಷಣ, ಕ್ರೀಡೆ ಉಳಿಯುತ್ತದೆ ಎಂದು ಹೇಳಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಶ್ರೀ ರವಿಚಂದ್ರ ಕಾರಂತ ಅವರು ಮುಖ್ಯ ಅತಿಥಿಯಾಗಿ ಪ್ರಾಸ್ತವಿಕ ಮಾತುಗಳನ್ನಾಡಿ ಕ್ರೀಡೆಯಲ್ಲಿ ನೀತಿ ನಿಯಮ ಪಾಲಿಸುವುದು ಮುಖ್ಯ ಎಂದರು.
ರಾಜ್ಯ ದೈಹಿಕ ಶಿಕ್ಷಣ ಸಂಘದ ಉಪಾಧ್ಯಕ್ಷರಾದ ಶ್ರೀ ರಾಜಾರಾಮ್ ಶೆಟ್ಟಿ, ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್, ಕಾರ್ಕಳ ಜ್ಞಾನಸುಧಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ. ಕೊಡವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲೆ ವಾಣಿ.ಕೆ. ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಡೀನ್ ಸ್ಟುಡೆಂಟ್ಸ್ ಅಫೇರ್ ಶಕುಂತಲಾ ಸುವರ್ಣ, ಅಕಾಡೆಮಿಕ್ ಅಡ್ವೈಸರ್ ಶಾರದಾ ಅಂಬರೀಶ್, ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು, ಇವರು ಉಪಸ್ಥಿತರಿದ್ದರು. ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಅವರು ಅಂಕಣ ಉದ್ಘಾಟಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಕು. ದರ್ಶಿನಿ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ರೇಶ್ಮಾ ಸಲಿಸ್ ವಂದಿಸಿದರು.













