32.2 C
Udupi
Friday, April 17, 2026
spot_img
spot_img
HomeBlogಕಾರ್ಕಳ: ಅಕ್ರಮ ಗಣಿಕಾರಿಕೆ ಮೇಲೆ ಪೊಲೀಸ್‌ ದಾಳಿ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಕಾರ್ಕಳ: ಅಕ್ರಮ ಗಣಿಕಾರಿಕೆ ಮೇಲೆ ಪೊಲೀಸ್‌ ದಾಳಿ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಕಾರ್ಕಳ: ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಶಂಕರಬೆಟ್ಟು ಅರ್ಬಿಪಾದೆ ಎಂಬಲ್ಲಿರುವ ಸರ್ವೇ ನಂಬ್ರ 281 ರಲ್ಲಿರುವ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಸುತ್ತಿರುವ ಮಾಹಿತಿಯಂತೆ ಮುರಳೀಧರ ನಾಯ್ಕ್ ಪೊಲೀಸ್‌ ಉಪ ನಿರೀಕ್ಷಕರು, ಕಾರ್ಕಳ ನಗರ ಪೊಲೀಸ್‌ ಠಾಣೆ ಇವರು ದಿನಾಂಕ: 15.04.2026 ರಂದು 08.20 ಗಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಶಂಕರಬೆಟ್ಟು ಅರ್ಬಿಪಾದೆ ಎಂಬಲ್ಲಿರುವ ಸರಕಾರಿ ಸ್ಥಳದಲ್ಲಿರುವ ಕಲ್ಲು ಕೋರೆ ಪ್ರದೇಶಕ್ಕೆ ದಾಳಿ ನಡೆಸಿ ಸದ್ರಿ ಸ್ಥಳವನ್ನು ಪರಿಶೀಲಿಸಿದಾಗ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದ್ದು, ಸದ್ರಿ ಪ್ರದೇಶದಲ್ಲಿ KA 19 B 7745 ನೇ ನಂಬ್ರದ ಟಿಪ್ಪರ್‌ ಲಾರಿ ಚಾಲಕ ಮತ್ತು KA 40 1801 ನೇ ಲಾರಿ ಚಾಲಕ ಸೇರಿಕೊಂಡು ಸಂಘಟಿತರಾಗಿ ಕಲ್ಲುಗಳನ್ನು ಕಳವು ಮಾಡಿ ಸಾಗಾಟ ಮಾಡಲು ಲೋಡ್ ಮಾಡುತ್ತಿದ್ದ ಚಾಲಕರನ್ನು ವಶಕ್ಕೆ ಪಡೆದು ಕಲ್ಲು ತೆಗೆಯಲು ಉಪಯೋಗಿಸಿದ 2 ಚಮ್ಮಡಿ, 1 ಕಬ್ಬಿಣದ ಹಾರೆ, 2 ಕಬ್ಬಿಣದ ಚಾಣ, 1 ಕಬ್ಬಿಣದ ಸರಳು ಮತ್ತು ಸೈಜ್‌ ಕಲ್ಲುಗಳನ್ನು ಲೋಡ್‌ ಮಾಡಿದ KA 19 B 7745 ನಂಬ್ರದ ಟಾಟಾ ಕಂಪೆನಿಯ ಟಿಪ್ಪರ್ ಮತ್ತು KA 40 1801 ನಂಬ್ರದ ಖಾಲಿ ಲಾರಿಯನ್ನು ವಶಕ್ಕೆ ಪಡೆದುಕೊಂಡು ಬಂದು ಸದ್ರಿ ಆರೋಪಿತರಾದ ಮನೋಜ್‌ ಮತ್ತು ಶರಣ್‌ ಎಂಬವರ ವಿರುದ್ಧ ಕಾನೂನು ಕ್ರಮದ ಬಗ್ಗೆ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2026ಕಲಂ 303(2), 112(1) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page