ತನ್ನ ಆಟೋರಿಕ್ಷಾಕ್ಕೆ, ಸಂಸ್ಥೆಯ ಸ್ಟಿಕರ್ ಅಂಟಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ ಜಗದೀಶ್ ಪೂಜಾರಿ….
ಅಭಿನಂದಿಸಿದ ಕರಕರಿ ತಂಡ…

ಕಾರ್ಕಳ: ಕರಕರಿ ಫ್ರೆಂಡ್ಸ್ ಸಂಸ್ಥೆ ಎರಡು ವರ್ಷದ ಹಿಂದೆ ಮಾಡಿರುವ ಸಹಾಯದ ನೆನಪಿಗಾಗಿ ತಾನು ದುಡಿಯುತ್ತಿರುವ ರಿಕ್ಷಾದಲ್ಲಿ ಕರಕರಿ ಫ್ರೆಂಡ್ ಹೆಸರು ಹಾಕಿಸಿದ ಜಗದೀಶ್ ಪೂಜಾರಿ ಬಜಗೋಳಿ.
ಎರಡು ವರ್ಷದ ಹಿಂದೆ ಬಜಗೋಳಿಯಲ್ಲಿ ನಡೆದ ಅಪಘಾತದಲ್ಲಿ ಜಗದೀಶ್ ಪೂಜಾರಿಯವರ ಒಂದು ಕಾಲನ್ನೇ ಕಟ್ ಮಾಡುವ ಸಂದರ್ಭ ಬಂತು, ಆ ಕಷ್ಟದ ಸಮಯದಲ್ಲಿ ಅವರ ಜೊತೆ ಕರಕರಿ ಫ್ರೆಂಡ್ಸ್ ಸಂಸ್ಥೆ ಕೈ ಜೋಡಿಸಿತು.
ಈಗಿನ ಕಾಲ ಘಟ್ಟದಲ್ಲಿ ನಾವು ಮಾಡಿರುವ ಸಹಾಯವನ್ನು ಮರೆತವರು ಅದೆಷ್ಟೋ ಜನ ಆದ್ರೆ ಜಗದೀಶ್ ಪೂಜಾರಿಯವರು ನಮ್ಮ ಸಂಸ್ಥೆಯ ಮೇಲೆ ಇಟ್ಟಿರುವ ನೆನಪು ಮತ್ತು ಪ್ರೀತಿಗೆ ನಾವೆಲ್ಲರೂ ಸದಾ ಅಭಾರಿಯಾಗಿದ್ದೇವೆ ಎಂದು ತಂಡ ತಿಳಿಸಿದೆ.













