
ಯಾದಗಿರಿ: ಕೋಡಿಮಠದ ಶ್ರೀಗಳು ಯುಗಾದಿ ಹಬ್ಬ ಸಮೀಪಿಸುತ್ತಿರುವ ಸಮಯದಲ್ಲಿ ಕರ್ನಾಟಕದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ನಮ್ಮಲ್ಲಿ ಎರಡು ಭಾಗ ಮಾಡುತ್ತಾರೆ. ಒಂದು ಸಂಕ್ರಾಂತಿ ಭವಿಷ್ಯ, ಇನ್ನೊಂದು ಯುಗಾದಿ ಭವಿಷ್ಯ ಅಂತ. ಸಂಕ್ರಾಂತಿ ಭವಿಷ್ಯ ರಾಜ-ಮಹಾರಾಜರುಗಳಿಗೆ, ದೊಡ್ಡ ವ್ಯಾಪಾರಸ್ಥರಿಗೆ ಸಂಕ್ರಾಂತಿ ಭವಿಷ್ಯ ಇರುತ್ತೆ. ಚಂದ್ರನನ್ನ ಆಧಾರವಾಗಿಟ್ಟುಕೊಂಡು ಮಳೆ, ಬೆಳೆ, ಆಳ್ವಿಕೆಗಳು, ರಾಜರುಗಳು, ಅವಘಡಗಳು, ದುಃಖ-ದುಮ್ಮಾನಗಳು, ಸಂತೋಷಗಳು ಇದರ ಮೇಲೆ ಹೇಳೋದೆ ಯುಗಾದಿ ಸಮಸ್ರಫಲ. ಯುಗಾದಿ ಇನ್ನೊಂದು ತಿಂಗಳು ದೂರವಿದೆ. ಅದರ ಮೇಲೆ ಹೇಳೋದು ಸ್ವಲ್ಪ ಕಷ್ಟ. ನಮ್ಮ ಪ್ರಕಾರ ಮುಂಬರುವಂತಹ ದಿನಗಳಲ್ಲಿ ಕರ್ನಾಟಕಕ್ಕೆ ತೊಂದರೆ ತಾಪತ್ರೆಗಳಿಲ್ಲ. ಮಳೆ ಬೆಳೆ ಚೆನ್ನಾಗಿದೆ. ಸುಭಿಕ್ಷಿತೆ ಇರುತ್ತೆ, ಯಾವುದೇ ತೊಂದರೆಗಳು ಕಾಣುತ್ತಿಲ್ಲ ಎಂದು ಹೇಳಿದ್ದಾರೆ.






















































