
ಬೆಂಗಳೂರು: ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು ಆಡಳಿತ ಪಕ್ಷದ ವೈಫಲ್ಯಗಳಾದ ಗ್ಯಾರಂಟಿ ಹಣ ಬಿಡುಗಡೆ ವಿಳಂಬ, ಕೆಪಿಎಸ್ಸಿ ಗೊಂದಲ, ಪರಿಶಿಷ್ಟರ ಹಣ ಗ್ಯಾರಂಟಿ ಬಳಕೆ, ಗ್ರೇಟರ್ ಬೆಂಗಳೂರು ಬಿಲ್ ಸೇರಿ ಹಲವು ವಿಚಾರ ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿ – ಜೆಡಿಎಸ್ ಜಂಟಿ ಹೋರಾಟಕ್ಕೆ ರೂಪುರೇಷೆ ತಯಾರಿಸಿಕೊಂಡಿದೆ.
ಇದಲ್ಲದೆ ರಾಜ್ಯಪಾಲರಿಗೆ ಅಪಮಾನ ಮಾಡುತ್ತಿರುವ ವಿಚಾರ ಮುಂದಿಟ್ಟುಕೊಂಡು ಶಾಸಕರ ಭವನದಿಂದ ಕಾಲ್ನಡಿಗೆ ಮೂಲಕ ವಿಧಾನಸೌಧ ಪ್ರವೇಶಿಸಲು ಬಿಜೆಪಿ-ಜೆಡಿಎಸ್ ನಿರ್ಧರಿಸಿದ್ದು, ಸದನದ ಒಳಗೆ ಮತ್ತು ಹೊರಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯತಂತ್ರ ರೂಪಿಸಿದೆ.
ಇಂದು ಬೆಳಗ್ಗೆ ರಾಜ್ಯಪಾಲರ ಭಾಷಣದ ನಂತರ ವಿಧಾನಸಭೆ, ವಿಧಾನ ಪರಿಷತ್ ಪ್ರತ್ಯೇಕ ಸಮಾವೇಶಗೊಂಡು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಿದೆ. ಅಲ್ಲದೇ ಕಲಾಪವನ್ನು ಸುಗಮವಾಗಿ ನಡೆಸುವ ಹಾಗೂ ಉಭಯ ಸದನಗಳ ನಡುವೆ ಸಮನ್ವಯ ಸಾಧಿಸುವ ಸಲುವಾಗಿ ಮಧ್ಯಾಹ್ನದ ನಂತರ ಜಂಟಿ ಕಲಾಪ ಸಲಹಾ ಸಮಿತಿ ಸಭೆಯೂ ನಡೆಯಲಿದೆ.
ಬಿಜೆಪಿ-ಜೆಡಿಎಸ್ ಅಟ್ಯಾಕ್:
. ಗ್ಯಾರಂಟಿ ಯೋಜನೆಗಳಿಗೆ ಹಣ ಸರಿಯಾಗಿ ಬಿಡುಗಡೆ ಆಗದೇ ಇರೋ ವಿಚಾರ ಪ್ರಸ್ತಾಪ ಮಾಡುವುದು.
. ಗ್ಯಾರಂಟಿ ಯೋಜನೆಗಳಿಗೆ ದಲಿತರಿಗೆ ಮೀಸಲಿದ್ದ SCSP
. ಕೆಪಿಎಸ್ಸಿ ಎಕ್ಸಾಂನಲ್ಲಿ ಆಗಿರೋ ಗೊಂದಲಗಳ ಬಗ್ಗೆ ವಿಷಯ ಪ್ರಸ್ತಾಪ.
.TSP ಹಣ ಬಳಕೆ ವಿರುದ್ಧ ಹೋರಾಟ ಮಾಡುವುದು.
. ಮೈಸೂರಿನ ಉದಯಪುರದಲ್ಲಿ ನಡೆದ ಗಲಭೆ ವಿಚಾರ ಪ್ರಸ್ತಾಪ.
. ಬಿಜೆಪಿ ಅವಧಿಯಲ್ಲಿ ಪ್ರಾರಂಭ ಮಾಡಿದ್ದ 9 ವಿವಿ ಕ್ಲೋಸ್ ಮಾಡಲು ಮುಂದಾಗಿರೋ ಸರ್ಕಾರದ ನಡೆ ವಿರುದ್ಧ ಹೋರಾಟ.
. ಗ್ರೇಟರ್ ಬೆಂಗಳೂರು ವಿಧೇಯಕ, ಟನಲ್ ರೋಡ್ಗೆ ವಿರೋಧ. ಈ ವಿಷಯ ಅಧಿವೇಶನದಲ್ಲಿ ಪ್ರಸ್ತಾಪ.
. ಬ್ರ್ಯಾಂಡ್ ಬೆಂಗಳೂರು ಅಂದ್ರು ಬೆಂಗಳೂರು ಅಭಿವೃದ್ಧಿ ಆಗದೇ ಇರೋ ವಿಚಾರ ಪ್ರಸ್ತಾಪ.
. ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ಇರೋ ಬಗ್ಗೆ ವಿಷಯ ಪ್ರಸ್ತಾಪ ಮಾಡಲು ನಿರ್ಧಾರ.


































