31 C
Udupi
Sunday, May 3, 2026
spot_img
spot_img
HomeBlogಕನ್ನಡ ನಿರ್ದೇಶಕ ಜೆಪಿ ತುಮಿನಾಡ್ ಸಿನಿಮಾದಲ್ಲಿ ಖ್ಯಾತ ಹಿಂದಿ ನಟ ಅಜಯ್ ದೇವಗನ್ ಅಭಿನಯ

ಕನ್ನಡ ನಿರ್ದೇಶಕ ಜೆಪಿ ತುಮಿನಾಡ್ ಸಿನಿಮಾದಲ್ಲಿ ಖ್ಯಾತ ಹಿಂದಿ ನಟ ಅಜಯ್ ದೇವಗನ್ ಅಭಿನಯ

ಇತ್ತೀಚೆಗೆ ಬಾರಿ ಜನಮನ್ನಣೆ ಪಡೆದ “ಸು ಫ್ರಂ ಸೋ” ಚಿತ್ರದ ನಿರ್ದೇಶಕ ಜೆಪಿ ತುಮಿನಾಡ್ ಅವರ ಸಿನಿಮಾದಲ್ಲಿ ಹಿಂದಿ ಖ್ಯಾತ ನಟ ಅಜಯ್ ದೇವಗನ್ ಅವರು ನಟಿಸುತ್ತಿದ್ದಾರೆ.

ಚೊಚ್ಚಲ ಚಿತ್ರದಿಂದ ದೇಶಾದ್ಯಂತ ಹೆಸರು ಮಾಡಿರುವ ನಿರ್ದೇಶಕ ಜೆಪಿ ತುಮಿನಾಡ್ ಮೊದಲ ಭೇಟಿಯಲ್ಲೇ ಕಥೆ ಒಪ್ಪಿಸಿ ಅಜಯ್ ದೇವಗನ್ ಡೇಟ್ಸ್ ಪಡೆದಿದ್ದು ಇದು ಮೂಲ ಕನ್ನಡ ಭಾಷೆಯ ಚಿತ್ರವಾಗಿದೆ. ಐದು ಭಾಷೆಗಳಲ್ಲಿ ತಯಾರಾಗಲಿದ್ದು ಟಾಕ್ಸಿಕ್ ಸಿನಿಮಾ ನಿರ್ಮಾಣ ಸಂಸ್ಥೆ ಕನ್ನಡದ ಕೆವಿಎನ್ ಫಿಲಂಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ ಎಂದು ತಿಳಿದು ಬಂದಿದೆ.

ಮೊದಲ ಪ್ರಯತ್ನದಲ್ಲಿ ಸಿನಿಮಾ ಗೆಲ್ಲಿಸಿದ ನಿರ್ದೇಶಕ ಜೆಪಿ ತುಮಿನಾಡ್ ಅವರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಜಯ್ ದೇವಗನ್ ತಮಗೊಂದು ಸಿನಿಮಾ ಕಥೆ ಹೇಳುವಂತೆ ಆಹ್ವಾನ ನೀಡಿದ್ದರಂತೆ. ಜೆಪಿ ತುಮಿನಾಡ್ ಹೇಳಿರುವ ಹಾರರ್ ಕಥೆ ಅಜಯ್ ದೇವಗನ್‌ ಅವರಿಗೆ ಮೆಚ್ಚುಗೆಯಾಗಿದೆ. 15 ದಿನದೊಳಗೆ ಸಂಪೂರ್ಣ ಸಿನಿಮಾ ಪ್ಲ್ಯಾನ್‌ ಸಿದ್ಧವಾಗಿದೆ ಎನ್ನಲಾಗಿದ್ದು ಇನ್ನೊಂದು ಸುತ್ತಿನ ಮಾತುಕತೆ ಬಳಿಕ ಕೆವಿಎನ್ ಫಿಲಂಸ್ ಈ ವಿಚಾರವನ್ನ ಘೋಷಣೆ ಮಾಡಲಿದೆ ಎಂದು ವರದಿಯಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page