
ಅಗತ್ಯ ವಸ್ತುಗಳ ದರ ಏರಿಕೆಯಾದರು ,ರೈತರು ಬೆಳೆದ ಬೆಳೆಗಳ ದರ ಏರಿಕೆಯಾಗದ ಹಿನ್ನೆಲೆ ರೈತರು ನಷ್ಟದ ಭಯ ಎದುರಿಸುತ್ತಿದ್ದು, ಸರಕಾರದ ಮತ್ತು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಯಲ್ಲಿ ಟೊಮೇಟೊ ದರ ಪಾತಾಳಕ್ಕೆ ಕುಸಿದಿದ್ದು, 25 ಕೆಜಿ ಟ್ರೇ ಕೇವಲ 50 ರೂ.ಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಹೆಚ್ಚಿನ ಪಸಲು ಬಂದ ಕಾರಣ, 20 ರಿಂದ 30 ಕೆಜಿ ಟೊಮೇಟೊ ಮಾರಾಟವಾದರೂ ರೈತರಿಗೆ ಕೆ.ಜಿಗೆ ಕೇವಲ ಎರಡು ರೂಪಾಯಿ ಸಿಗುವಂತಾಗಿದೆ. ಈ ವಿಚಾರ ಗದಗದ ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಬದನೆಕಾಯಿ ,ನುಗ್ಗೆಕಾಯಿಯ ಬೆಲೆಯು ಕುಸಿತಗೊಂಡಿದ್ದು, ನುಗ್ಗೆಕಾಯಿ ಕೆ.ಜಿಗೆ 10 ರೂಪಾಯಿಗೆ ಮಾರಾಟವಾಗುತ್ತಿದೆ.





















