
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಜಲಮಂಡಳಿ ಸಭೆ ಬಳಿಕ ಮಾತಾಡಿ ಎಲ್ಲಾ ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು ಎಂದು ಪ್ರಶ್ನಿಸಿ ಇನ್ಮೇಲೆ ಕಾವೇರಿ ನೀರನ್ನು ಫ್ರೀಯಾಗಿ ಕೊಡೋಕೆ ಆಗಲ್ಲ.. ಒಂದು ಪೈಸೆಯಾದರೂ ಬಿಲ್ ಕಟ್ಟಬೇಕು. ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಿದ್ದಾರೆ. ಹೀಗಾಗಿ ಎಲ್ಲಾ ಸರಿದೂಗಿಸಿಕೊಂಡು ಹೋಗಬೇಕಲ್ವಾ ಎಂದು ಹೇಳುವ ಮೂಲಕ ನೀರಿನ ದರ ಏರಿಸುವ ಸುಳಿವು ನೀಡಿದ್ದಾರೆ.
ಇನ್ನೂ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆಯೂ ಇದ್ದು ಈಗಾಗಲೇ ವಿದ್ಯುತ್ ದರ ಏರಿಕೆಗೆ 5 ವಿದ್ಯುತ್ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ. ಪ್ರತಿ ಯೂನಿಟ್‌ಗೆ 2025-26ರ ಸಾಲಿನಲ್ಲಿ 67 ಪೈಸೆ, 2026-27ರಲ್ಲಿ 74 ಪೈಸೆ ಮತ್ತು 2027-28ರಲ್ಲಿ 91 ಪೈಸೆ ಹೆಚ್ಚಳಕ್ಕೆ ಈಗಲೇ ಅನುಮೋದನೆ ನೀಡಿ ಎಂದು ಮನವಿ ಮಾಡಿದೆ.





















