31.8 C
Udupi
Thursday, April 23, 2026
spot_img
spot_img
HomeBlogಎಕ್ಸಲೆಂಟ್ ಮೂಡುಬಿದಿರೆ ಶಾಲೆಯ ಸುವರ್ಣ ಸಾಧನೆ

ಎಕ್ಸಲೆಂಟ್ ಮೂಡುಬಿದಿರೆ ಶಾಲೆಯ ಸುವರ್ಣ ಸಾಧನೆ

2025 – 26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಅಗ್ರ 10 ರ್‍ಯಾಂಕ್ ಗಳಲ್ಲಿ 9 ವಿದ್ಯಾರ್ಥಿಗಳು

ಎಕ್ಸಲೆಂಟ್ ಮೂಡುಬಿದಿರೆ ಶಾಲೆ 2025-26ರ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅಗ್ರ 10 ರ‍್ಯಾಂಕ್‌ಗಳಲ್ಲಿ 9 ವಿದ್ಯಾರ್ಥಿಗಳು ರ‍್ಯಾಂಕ್‌ಗಳನ್ನು ಪಡೆದು ಸತತ 6ನೇ ಬಾರಿ ಶೇಕಡಾ 100 ಫಲಿತಾಂಶವನ್ನು ಪಡೆದು ತನ್ನ ಶೈಕ್ಷಣಿಕ ಸಾಧನೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಸಚಿನ್ ಡಿ ನಾಯ್ಕ್ 622 (4ನೇ ರ‍್ಯಾಂಕ್), ನಕ್ಷತ್ರ ವಿ – 620 (6 ನೇ ರ‍್ಯಾಂಕ್), ಗಗನ್ ಪಾಟೀಲ್ – 618( 8 ನೇ ರ‍್ಯಾಂಕ್), ದೇವಾನಂದ ಹನುಮಂತ ಗೌಡ ಬಿರಾದಾರ್ – 618(8 ನೇ ರ‍್ಯಾಂಕ್), ಅನ್‌ಮೋಲ್ ಆರ್ ಪಾಟೀಲ್ – 618( 8 ನೇ ರ‍್ಯಾಂಕ್), ಪ್ರತೀಕ್ ಸಂಗ್ರೀಷಿ – 617 (9 ನೇ ರ‍್ಯಾಂಕ್), ಸಿ ಹರಿಪ್ರೀತ್ ವಿ ಪೈ – 616( 10 ನೇ ರ‍್ಯಾಂಕ್), ಆರ್ಯನ್ ಕುಮಾರ್ ಹಳ್ಳಿ – 616(10 ನೇ ರ‍್ಯಾಂಕ್), ಆಕಾಂಕ್ಷ್ ಎಮ್ ಜೈನ್ – 616 ( 10 ನೇ ರ‍್ಯಾಂಕ್) ಗಳನ್ನು ಗಳಿಸುವುದರ ಮೂಲಕ ಸಂಸ್ಥೆಯ ಸಂಸ್ಕಾರಭರಿತ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.

ಈ ಸಾಧನೆಯಲ್ಲಿ 23 ವಿದ್ಯಾರ್ಥಿಗಳು 610ಕ್ಕಿಂತ ಹೆಚ್ಚು, 45 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಮಿಂಚಿದ್ದಾರೆ. 53 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು, 112 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಹಾಗೂ 151 ವಿದ್ಯಾರ್ಥಿಗಳು 85% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯನ್ನು ಪಡೆದು ಸಾಧನೆಯನ್ನು ಮೆರೆದಿದ್ದಾರೆ. ವಿಷಯವಾರು ಸಾಧನೆಯಲ್ಲಿಯೂ ವಿದ್ಯಾರ್ಥಿಗಳು ಮೈಲಿಗಲ್ಲು ಸ್ಥಾಪಿಸಿದ್ದು, ಸಂಸ್ಕöÈತದಲ್ಲಿ 45 ವಿದ್ಯಾರ್ಥಿಗಳು ಕನ್ನಡದಲ್ಲಿ 44, ಹಿಂದಿಯಲ್ಲಿ 31, ಗಣಿತದಲ್ಲಿ 11, ಸಮಾಜ ವಿಜ್ಞಾನದಲ್ಲಿ 8 ಮತ್ತು ವಿಜ್ಞಾನ ವಿಷಯದಲ್ಲಿ 2 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳು ಮತ್ತು ಪ್ರಥಮ ಭಾಷೆ ಇಂಗ್ಲೀಷ್‌ನಲ್ಲಿ 13 ವಿದ್ಯಾರ್ಥಿಗಳು 125 ಅಂಕಗಳಿಗೆ 124 ಅಂಕಗಳನ್ನು ಪಡೆದು ಮಿಂಚಿದ್ದಾರೆ. ಒಟ್ಟಾರೆಯಾಗಿ 141 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆಯುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಈ ಅಭೂತಪೂವ ಯಶಸ್ಸಿಗೆ ಸಂತಸ ವ್ಯಕ್ಯಪಡಿಸಿರುವ ಎಕ್ಸಲೆಂಟ್ ಗ್ರೂಪ್ ಆ¥s಼ï ಇನ್ಸಿಟ್ಯೂಷನ್ಸ್ನ ಅಧ್ಯಕ್ಷರಾದ ಯುವರಾಜ್ ಜೈನ್ ನಮ್ಮ ವಿದ್ಯಾರ್ಥಿಗಳ ಶಿಸ್ತುಬದ್ದ ಅಭ್ಯಾಸ, ಪರಿಶ್ರಮ, ಬೋಧಕ ವರ್ಗದವರ ಮಾರ್ಗದರ್ಶನದಿಂದ ಈ ಯಶಸ್ಸು ಲಭಿಸಿದೆ. ಈ ಯಶಸ್ಸಿಗೆ ಶ್ರಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಹಾಗೂ ಬೋಧಕ ವರ್ಗಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಶೈಕ್ಷಣಿಕವಾಗಿ ಹಿಂದುಳಿದ ರಾಜ್ಯದ ಹಲವು ವಿದ್ಯಾರ್ಥಿಗಳು ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಸೇರಿದ ನಂತರ ಅತ್ಯುತ್ತಮ ಫಲಿತಾಂಶ ಪಡೆದಿರುವುದು ​ಸಂಸ್ಥೆಯ ಉತ್ಕöÈಷ್ಟ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಸಂತಸ ವ್ಯಕ್ತಪಡಿಸಿದರು. ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಈ ಐತಿಹಾಸಿಕ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page