“ಮನುಷ್ಯ ನಿಲ್ಲುವ ಭೂಮಿ ನನ್ನದು ಎನ್ನಲು ಯಾರಿಗೂ ಸಾಧ್ಯವಿಲ್ಲ” -ಗಿರೀಶ್ ರಾವ್.

ಆಧುನಿಕತೆಯ ಸ್ಪರ್ಶದ ನಡುವೆ ಪುರಾತನ ಸಂಸ್ಕೃತಿಯು ಮರೆಯಾಗುವ ಕಾಲಘಟ್ಟದಲ್ಲೇ ತುಳುನಾಡಿನಲ್ಲಿ ಮೂಡಿಬಂದದ್ದು ಕೆಸರದ ಗೊಬ್ಬು.. ಇದರಿಂದ ಯುವ ಜನರಿಗೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಮತ್ತೆ ಪರಿಚಯಿಸಲು ಅವಕಾಶವಾಗಿದೆ. ಹಾಗೂ ಈ ಮಣ್ಣಿನ ಋಣವನ್ನು ತೀರಿಸಲು ಅಸಾಧ್ಯ ಎಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೆ ಸರ ಶ್ರೀ ಗಿರೀಶ್ ರಾವ್ ರವರು ಆಟಿಡೊಂಜಿ ಮರಾಠ ಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಪ್ರಗತಿಪರ ಕೃಷಿಕ ಶ್ರೀ ವಾಸೋಜಿ ರಾವ್ ಸಾಣೂರು ಇವರು ಉದ್ಘಾಟಿಸಿದರು
ಆಷಾಢ ಮಾಸದ ವೈಶಿಷ್ಟತೆಯ ಬಗ್ಗೆ ಉಪನ್ಯಾಸವನ್ನು ನೀಡಿದ ಶ್ರೀ ರಾಮಚಂದ್ರ ನೆಲ್ಲಿಕಾರ್ ಇವರು ತುಳುನಾಡಿನ ಪರಂಪರೆ ಇತಿಹಾಸ ಪೂರ್ಣವಾಗಿದ್ದು ವಿಜ್ಞಾನಗಳಿಗೆ ಹೋಲುವಂತಹ.. ಹಾಗೂ ಯಾವುದೇ ಕಟ್ಟು ಕಥೆಗಳಾಗದೆ ನೈಜ್ಯತೆಯನ್ನು ಬಿಂಬಿಸುವ ಸಂಪ್ರದಾಯವಾಗಿದ್ದು.. ಅದನ್ನು ಇಂದು ನಾವು ವಾಸ್ತವದಲ್ಲಿ ಕಾಣುತ್ತಿದ್ದೇವೆ ಎನ್ನುವ ಮಾತುಗಳಾಡಿದರು.
50 ಕ್ಕಿಂತ ಹೆಚ್ಚಿನ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.
ವಿವಿಧ ಆಟೋಟಗಳು ಕೆಸರುಗದ್ದೆಯ ಕ್ರೀಡೆಗಳು.. ಮನೋರಂಜನ ಕಾರ್ಯಕ್ರಮಗಳು ನಡೆದವು. ಸುಮಾರು 300 ಕ್ಕಿಂತ ಹೆಚ್ಚು ಸಮಾಜ ಬಂದುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ದೇವಳದ ಮೊಕ್ತೆ ಸರರದ ಶ್ರೀ ಗಣೇಶ ರಾವ್ ಶ್ರೀ ಸುಧೀದ್ರ ರಾವ್. ಶ್ರೀ ರಾಮಚಂದ್ರರಾವ್ ಶ್ರೀ ದಯಾನಂದ ರಾವ್. ಸೇವಾ ಸಮಿತಿಯ ಸಂಚಾಲಕರಾದ ಶ್ರೀ ವೀರೇಂದ್ರ ರಾವ್. ಸಹ ಸಂಚಾಲಕರಾದ ಪ್ರಕಾಶ್ ರಾವ್. ಹಾಗೂ ಸೇವಾ ಸಮಿತಿಯ ಮತ್ತು ಸಮಾಜದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮ ವನ್ನು ಶ್ರೀಮತಿ ಆಶಾಲಾತ ನಿರೂಪಿಸಿ. ಶ್ರೀಮತಿ ವಿಶಾಲ ಸ್ವಾಗತಿಸಿ. ಶ್ರೀಮತಿ ದಿವ್ಯಾ ರವರು ಧನ್ಯವಾದ ನೀಡಿದರು






















































































