
ಬಂಟರ ಯಾನೆ ನಾಡವರ ಮಾತೃ ಸಂಘ ರಿ. ಮಂಗಳೂರು ಕಾರ್ಕಳ-ಹೆಬ್ರಿ ತಾಲೂಕು ಸಮಿತಿ, ಮಹಿಳಾ ಬಂಟರ ಸಂಘ ಕಾರ್ಕಳ ಹಾಗೂ ಯುವ ಬಂಟರ ಸಂಘ ಕಾರ್ಕಳ ವತಿಯಿಂದ ಇದೇ ಬರುವ ಆಗಸ್ಟ್ 11ರಂದು ಭಾನುವಾರ ಶ್ರೀ ಮಾಲಿಂಗೇಶ್ವರ ದೇವಸ್ಥಾನದ ವಠಾರ ಪೆರ್ವಾಜೆ ಇಲ್ಲಿ ಆಟಿಡೊಂಜಿ ಬಂಟಕೂಟ ಜೊತೆಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಲಿದೆ.
ಇದರ ಪ್ರಯುಕ್ತ ,ಆಕರ್ಷಕ ಬಹುಮಾನಗಳೊಂದಿಗೆ ರೀಲ್ಸ್ ಸ್ಪರ್ಧೆ(ಎಲ್ಲರಿಗೂ ಮುಕ್ತ ಅವಕಾಶ) ನಡೆಯಲಿದೆ. ಕೆಸರುಗದ್ದೆಯ ಸುಂದರ ಕ್ಷಣಗಳನ್ನು ತಮ್ಮ ಮೊಬೈಲ್ ಅಥವಾ ಕ್ಯಾಮೆರದಲ್ಲಿ ಚಿತ್ರಿಕರಿಸಿ ಅದನ್ನು ರೀಲ್ಸ್ ಮಾಡಿ instagram ಪೇಜ್ @youthbuntskarkala ಜೊತೆಗೆ ಕೊಲ್ಯಾಬ್ ಮಾಡಬೇಕು.
ಅತಿ ಹೆಚ್ಚು ವೀವ್ಸ್ ಪಡೆದಿರುವ ರೀಲ್ಸ್ ಗೆ 1,500 ನಗದು ಬಹುಮಾನ, ಮತ್ತು ತೀರ್ಪುಗಾರರು ಆಯ್ಕೆ ಮಾಡಿದ ರೀಲ್ಸ್ ಗೆ 1,500 ನಗದು ಬಹುಮಾನ ನೀಡಲಾಗುವುದು. ಅಗಸ್ಟ್ 13ರ ಮಂಗಳವಾರ ಅಪರನ್ನ 12 ಗಂಟೆಯ ಒಳಗೆ ನಿಮ್ಮ ರೀಲ್ಸ್ ಪೋಸ್ಟ್ ಆಗಬೇಕು. 15 ಆಗಸ್ಟ್ ಸಂಜೆ 4:48ಕ್ಕೆ ಫಲಿತಾಂಶ ಪ್ರಕಟ ಗೊಳ್ಳಲಿದೆ.
ಈ ಸ್ಪರ್ಧೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇರಲಿದೆ.













