28.4 C
Udupi
Wednesday, August 12, 2026
spot_img
spot_img
HomeBlogಯುವಶಕ್ತಿ ಸಮೂಹ ಸಂಸ್ಥೆಗಳ ವತಿಯಿಂದ “ಆಟಿಡೊಂಜಿ ಕೆಸರ್ದಕೂಟ” ಕಾರ್ಯಕ್ರಮ

ಯುವಶಕ್ತಿ ಸಮೂಹ ಸಂಸ್ಥೆಗಳ ವತಿಯಿಂದ “ಆಟಿಡೊಂಜಿ ಕೆಸರ್ದಕೂಟ” ಕಾರ್ಯಕ್ರಮ

ಯುವಶಕ್ತಿ ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ “ಆಟಿಡೊಂಜಿ ಕೆಸರ್ದಕೂಟ” ಕಾರ್ಯಕ್ರಮದ ಸಭಾ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರವೀಣ್ ಕೋಟ್ಯಾನ್, ನೆಕ್ಲಾಜೆ ಗುತ್ತು ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ್ ಶೆಟ್ಟಿ, ಅಧ್ಯಕ್ಷರು, ಯುವಶಕ್ತಿ ಎಜುಕೇಶನ್ ಸೊಸೈಟಿ ಅವರು ವಹಿಸಿದ್ದರು.

ಸಭೆಯನ್ನು ಉದ್ದೇಶಿಸಿ ಮುಖ್ಯ ಅತಿಥಿಗಳಾದ ಹಿತೇಶ್ ಶೆಟ್ಟಿ ಅವರು, ನಮ್ಮ ಹಿಂದೂ ದೇಶದ ನಾಗರೀಕತೆಯು ಶ್ರೇಷ್ಠ ಹಾಗೂ ಬಲಿಷ್ಠವಾಗಿರುವುದಕ್ಕೆ ಇಂತಹ ಗುತ್ತು ಪರಂಪರೆಯ ಮನೆಗಳು ಇಂದಿಗೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವುದೇ ಕಾರಣ. ಮನೆಯಲ್ಲಿ ಹಿರಿಯರು ತಮ್ಮ ಸಂಸ್ಕೃತಿಯನ್ನು ತಮ್ಮ ಮಕ್ಕಳಿಗೆ ತಿಳಿಸಿ ಅದನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು ಎಂದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸುರೇಶ್ ಕೋಟ್ಯಾನ್, ಪಲ್ಲವಿ ಡೆಕೋರೇಟರ್ಸ್, ಪ್ರಸಾದ್ ಪೂಜಾರಿ, ಅಮ್ಮ ಡೆಕೋರೇಟರ್ಸ್, ಸಾಣೂರು, ಅಬ್ದುಲ್ ಖಾಲಿಕ್, ಸಂಚಾಲಕರು, ಯುವಶಕ್ತಿ ಎಜುಕೇಶನ್ ಸೊಸೈಟಿ , , ನಿರ್ದೇಶಕ ರೂಗಳಾದ ವಸಂತ್ ಎಂ, ಸುರೇಖಾ ಪ್ರದೀಪ್ ಕೋಟ್ಯಾನ್, ನೆಕ್ಲಾಜೆಗುತ್ತು ಪ್ರಶಾಂತ್ ಕೋಟ್ಯಾನ್,ಪುರಸಭೆಯ ಮಾಜಿ ಉಪಾಧ್ಯಕ್ಷರು, ಹಾಗೂ ನಳಿನಾಕ್ಷಿ ಹೆಗ್ಡೆ, ಮುಖ್ಯೋಪಾಧ್ಯಾಯಿನಿ, ಯುವಶಕ್ತಿ ಪ್ರಾಥಮಿಕ ಶಾಲೆ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಲ್ಲರ ಉತ್ಸಾಹಭರಿತ ಭಾಗವಹಿಸುವಿಕೆ ಎಲ್ಲರ ಗಮನ ಸೆಳೆಯಿತು. ಯುವಶಕ್ತಿ ಯೂತ್ ಕ್ಲಬ್ ನ ಅಧ್ಯಕ್ಷರಾದ ವೆಂಕಟೇಶ್, ಮಹಿಳಾ ಮಂಡಲದ ಅಧ್ಯಕ್ಷೆ ಸುಪ್ರಿಯಾ ಕೋಟ್ಯಾನ್, ಯುವಶಕ್ತಿ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚೇತನ್ ಶೆಟ್ಟಿ ಇವರುಗಳ ಮುಂದಾಳತ್ವದಲ್ಲಿ ಸಾಂಪ್ರದಾಯಿಕ ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಗ್ರಾಮೀಣ ಜೀವನದ ಸೊಗಡನ್ನು ಪರಿಚಯಿಸುವ ನಿಟ್ಟಿನಲ್ಲಿ “ಆಟಿಡೊಂಜಿ ಕೆಸರ್ದಕೂಟ” ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದಿತು.

ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಚೈತ್ರ ಅವರು ಅಚ್ಚುಕಟ್ಟಾಗಿ ನೆರವೇರಿಸಿದರು. ಕೊನೆಯಲ್ಲಿ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page